





ಕೊಕ್ಕಡ: ಗ್ರಾಮ ಪಂಚಾಯತ್ ವತಿಯಿಂದ ವಾರ್ಡ್ ಜನರಿಗೆ ಕುಡಿಯುವ ನೀರು ಕಲ್ಪಿಸಲು ಕೊಳವೆಬಾವಿ ಕೊರೆಸುವ ಸಂದರ್ಭ ಸ್ಥಳೀಯ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ಕೊಕ್ಕಡ ಗ್ರಾಮದ ಪಿಜಿನಡ್ಕ ಸಮೀಪದ ಕೆಚೋಡಿ ಎಂಬಲ್ಲಿ ಫೆ.3ರ ಸಂಜೆ ನಡೆದಿದೆ.

ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಕೊಕ್ಕಡ ಗ್ರಾಮ ಪಂಚಾಯತ್ ವತಿಯಿಂದ ಕೆಚೋಡಿ ಜನರಿಗಾಗಿ ಕುಡಿಯುವ ನೀರು ಪೂರೈಸಲು ಶುಕ್ರವಾರ ಕೊಳವೆಬಾವಿ ತೆರೆಯಲೆಂದು ಯಂತ್ರೋಪಕರಣಗಳನ್ನು ತಂದು ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ಕೊಳವೆ ಬಾವಿ ತೆರೆಯಲು ಸೂಚಿಸಿದ ಜಾಗದಿಂದ ಸಮೀಪದ ಮನೆಯವರಾದ ರೋಸಮ್ಮ ಎಂಬುವವರು ಪಂಚಾಯತ್ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ವಾರ್ಡ್ ಸದಸ್ಯರಿಗೆ ಈ ಜಾಗದಲ್ಲಿ ಕೊಳವೆ ಬಾವಿ ತೆರೆಯಲು ಬಿಡುವುದಿಲ್ಲ. ಇಲ್ಲಿ ತೆಗೆದರೆ ನಮ್ಮ ಮನೆಯ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಬಹುದು. ಹಾಗಾಗಿ ನಮ್ಮ ಮನೆಯ ಅಕ್ಕಪಕ್ಕ ಕೊಳವೆ ಬಾವಿ ತೆರೆಯಬೇಡಿ ಎಂದು ವಾದಿಸಿದರು. ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಎಷ್ಟೇ ತಿಳಿ ಹೇಳಿದರು ರೋಸಮ್ಮರವರು ಕೊಳವೆಬಾವಿ ತೆರೆಯಲು ಅವಕಾಶ ನೀಡಲೇ ಇಲ್ಲ. ಬಳಿಕ ಧರ್ಮಸ್ಥಳ ಪೊಲೀಸರಿಗೆ ಪಂಚಾಯತಿನಿಂದ ಮಾಹಿತಿ ನೀಡಿ ಸ್ಥಳಕ್ಕೆ ಪೊಲೀಸರು ಆಗಮಿಸಿ, ಪೊಲೀಸರ ಸುಪರ್ದಿಯಲ್ಲಿ ಕೊಳವೆಬಾವಿ ಕೊರೆಯಲಾಯಿತು.