ಕೆಂಪಕೋಡಿಯ ಕಲ್ಕುಡ -ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವಕ್ಕೆ ರಕ್ಷಿತ್ ಶಿವರಾಮ್ ಭೇಟಿ

ಶೇರ್ ಮಾಡಿ

ಕೊಕ್ಕಡ ಗ್ರಾಮದ ಕೆಂಪಕೋಡಿಯಲ್ಲಿರುವ ಕಲ್ಕುಡ -ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಫೆ.03ರಂದು ಬೆಳಗ್ಗೆ ಗೊನೆ ಮುಹೂರ್ತದಿಂದ ಆರಂಭಗೊಂಡು ಫೆ.10 ರಂದು ಬೆಳಗ್ಗೆ ಗಣ ಹೋಮ, ನಾಗತಂಬಿಲ, ದೈವಗಳಿಗೆ ಶುದ್ದಿ ಕಳಶ, ಸಂಜೆ 5 ರಿಂದ ತೋರಣ ಮುಹೂರ್ತ, 6ಕ್ಕೆ ತೈಲ ಮುಹೂರ್ತ ಹಾಗೂ ಅನ್ನ ಸಂತರ್ಪಣೆ. ರಾತ್ರೆ ಗಂಟೆ 8 ರಿಂದ ನೇಮೋತ್ಸವ. ಫೆ.11 ರ ಮುಂಜಾನೆ 3 ಗಂಟೆಗೆ ಅಪ್ಪಗಾಯಿ ಹಾಗೂ ಮುಂಜಾನೆ 4ಕ್ಕೆ ಕೈಕಾಣಿಕೆ ನೆರವೇರಿತು.

ಈ ಕಾರ್ಯಕ್ರಮಕ್ಕೆ ಬೆಸ್ಟ್ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ರಕ್ಷಿತ್ ಶಿವರಾಮ್ ಭೇಟಿ ನೀಡಿದರು. ಇವರಿಗೆ ಕಲ್ಕುಡ ಕಲ್ಲುರ್ಟಿ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾದ ಕೆ.ಉಗ್ಗಪ್ಪ ಪೂಜಾರಿ ಕೆಂಪಕೋಡಿ, ಶಾಲು ಹೋದಿಸಿ ಫಲಪುಷ್ಪ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ನೇಮೋತ್ಸವ ಸಮಿತಿ ಅಧ್ಯಕ್ಷರಾದ ಮುತ್ತಪ್ಪ ಗೌಡ ಕೇಚೋಡಿ, ಕಾರ್ಯದರ್ಶಿ ಶ್ರೀಮತಿ ಶೋಭಾ ನಾರಾಯಣಗೌಡ ಆಲಂಬಿಲ, ಕಲ್ಕುಡ ಕಲ್ಲುರ್ಟಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಗಿರಿಯಪ್ಪ ಗೌಡ, ಕಾರ್ಯದರ್ಶಿ ಚಂದ್ರಶೇಖರ ಬಿ ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

error: Content is protected !!