ಕುಟ್ರುಪಾಡಿ ಗ್ರಾಮದ 3 ಮತ್ತು 4ನೇ ವಾರ್ಡ್ ನ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ

ಶೇರ್ ಮಾಡಿ

ಕಡಬ: ಕುಟ್ರುಪಾಡಿ ಗ್ರಾಮದ 3 ಮತ್ತು 4ನೇ ವಾರ್ಡ್ ನ ಮತದಾನ ಬಹಿಷ್ಕಾರ ಬ್ಯಾನರ್ ಅಳವಡಿಕೆ ಹಾಗೂ ಕಡಬ ತಹಶಿಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಇಲಾಖೆಗೆ ರಸ್ತೆ ಅಭಿವೃದ್ಧಿಗೋಸ್ಕರ ಮನವಿಯನ್ನು ಕಡಬ ತಹಶಿಲ್ದಾರರ ಕಚೇರಿಯಲ್ಲಿ ಫೆಬ್ರವರಿ 14ರಂದು ಸಲ್ಲಿಸಲಾಯಿತು.

ಕುಟ್ರುಪ್ಪಾಡಿ ಗ್ರಾಮದ 3 ಹಾಗೂ 4ನೇ ವಾರ್ಡಿನ ಹೊಸ್ಮಠ ಕಾರ್ಕಳ ಸಂಪರ್ಕ ರಸ್ತೆಯು ತೀರ ಹದಗಿಟ್ಟಿದ್ದು ನಡೆದಾಡುವುದಕ್ಕೂ ಆಗದ ಸ್ಥಿತಿಯಲ್ಲಿದ್ದು, ಸದ್ರಿ ರಸ್ತೆಯು ಅಭಿವೃದ್ಧಿಯಾಗದೆ ಸುಮಾರು 30 ರಿಂದ 40 ವರ್ಷಗಳು ಆಗಿವೆ

ಅನೇಕ ಬಾರಿ ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಲಿಲ್ಲ. ಸುಮಾರು ಎರಡರಿಂದ ಮೂರು ವರ್ಷಗಳ ಮುಂಚೆನೆ ಸದ್ರಿ ರಸ್ತೆಗಳ ಕಡತಗಳು ಹಣಕಾಸು ಇಲಾಖೆಯಲ್ಲಿ ಬಾಕಿ ಇಟ್ಟಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಸದ್ರಿ ರಸ್ತೆ ಅಭಿವೃದ್ಧಿಯಾಗದಿದ್ದಲ್ಲಿ ಮುಂದಿನ ಎಲ್ಲಾ ಚುನಾವಣೆಯ ಮತದಾನವನ್ನು ನೋಟಾ ವಾಗಿ ಬಹಿಷ್ಕರಿಸಲು ಗ್ರಾಮಸ್ಥರು ಒಮ್ಮತದಿಂದ ಒಪ್ಪಿರುತ್ತಾರೆ ಹಾಗೂ ಮೂಲಭೂತ ಸೌಕರ್ಯಕ್ಕೋಸ್ಕರ ಹೋರಾಡಲು ಸಮಿತಿಯು ರಚನೆಯಾಗಿದ್ದು, ನೋಟಾ ಮತದಾನದ ಬಹಿಷ್ಕಾರ ಸಂಕೇತವಾಗಿ ಬ್ಯಾನರ್ ಗಳನ್ನು ಅಳವಡಿಸಿರುತ್ತೇವೆ. ನಮ್ಮ ರಸ್ತೆ ಅಭಿವೃದ್ಧಿಯಾಗದಿದ್ದಲ್ಲಿ ಹೋರಾಟ ಅನಿವಾರ್ಯ ಹಾಗೂ ಮುಂದುವರೆದು ನೋಟಾ ಮತದಾನ ನಿರ್ಧಾರ ತಮ್ಮ ಗಮನಕ್ಕೆ ಮನವಿ ಮೂಲಕ ನೀಡುತ್ತೇವೆ ಎಂದು ಕುಟ್ರುಪ್ಪಾಡಿ ಗ್ರಾಮ ಜನಜಾಗೃತಿ ಸಮಿತಿ ಹಾಗೂ ನೊಂದ ಮತದಾರರು ಸಹಿಯೊಂದಿಗೆ ಕಡಬ ಉಪ ತಹಶಿಲ್ದಾರರಾದ ಗೋಪಾಲ್. ಕೆ ಇವರ ಮೂಲಕ ಮನವಿ ಸಲ್ಲಿಸಿದರು.

Leave a Reply

error: Content is protected !!