





ಕೊಕ್ಕಡ: ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯು ಮುನ್ನೂರು ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು, ತನ್ಮೂಲಕ ಪುತ್ತೂರಿಗೆ, ದ.ಕ ಜಿಲ್ಲಾ ಗ್ರಾಮಾಂತರ ಜನರ ಅನುಕೂಲಕ್ಕಾಗಿ ಸರಕಾರಿ ಮೆಡಿಕಲ್ ಕಾಲೇಜ್ ಮಂಜೂರಾತಿ ಬಗ್ಗೆ ಸಹಿ ಸಂಗ್ರಹ ಅಭಿಯಾನವಾಗಿ ಇಂದು ಗೋಳಿತೊಟ್ಟು, ಕೊಕ್ಕಡ, ಸೌತಡ್ಕ ಪ್ರದೇಶಗಳಲ್ಲಿ ಜನರ ಸಹಕಾರ ಕೋರಲಾಯಿತು.

ಪರಿಸರ ಪ್ರೇಮಿ ದುರ್ಗಾಸಿಂಗ್, ಎಂಡೋ ಸಂತ್ರಸ್ತರ ಪರ ಹೋರಾಟಗಾರ ಶ್ರೀಧರ ಗೌಡ, ಸಾಮಾಜಿಕ ಕಾರ್ಯಕರ್ತರಾದ ರಾಘವ ಭಂಡಾರಿ ಕೊಕ್ಕಡ ಇವರಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಎಲ್ಲರೂ ಗ್ರಾಮಾಂತರದಲ್ಲಿ ಈ ಬಗ್ಗೆ ಸಹಿ ಸಂಗ್ರಹಿಸಿ ಕಳುಹಿಸುವ ಭರವಸೆ ನೀಡಿದ್ದಾರೆ.

ಅದೇ ರೀತಿ ಈ ಸಾರ್ವಜನಿಕ ಹಿತಾಸಕ್ತಿಯ ಕಾರ್ಯ ಬೇಗನೆ ಫಲಪ್ರದವಾಗಲೆಂದು ಶ್ರೀ ಸೌತಡ್ಕ ಮಹಾಗಣಪತಿ ಮತ್ತು ಕೊಕ್ಕಡ ಶ್ರೀ ವೈದ್ಯನಾಥೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಭಟ್, ರಾಜೇಶ್ ಕೃಷ್ಣ ಪ್ರಸಾದ್, ಸಂಜೀವ ಕಬಕ ರವರ ಸಹಕಾರದಲ್ಲಿ ಈ ಅಭಿಯಾನ ಮಾಡಲಾಯಿತು.