ಕೇನ್ಯದಲ್ಲಿ ದಲಿತ ಮಹಿಳೆಗೆ ಮನೆಕಟ್ಟಲು ಆಕ್ಷೇಪಿಸಿ ಅನ್ಯಾಯ; ಪ್ರತಿಭಟನೆಯ ಎಚ್ಚರಿಕೆ

ಶೇರ್ ಮಾಡಿ

ಕಡಬ: ಕೇನ್ಯ ಗ್ರಾಮದ ಪಲ್ಲಕುಮೇರು ನಿವಾಸಿ ಪರಿಶಿಷ್ಠ ಪಂಗಡದ ಮಹಿಳೆ ಕಾವೇರಿ ಎಂಬವರಿಗೆ ತನಗೆ ಮಂಜೂರಾದ ಭೂಮಿಯಲ್ಲಿ ಮನೆಕಟ್ಟಲು ಖಾಸಗಿಯವರು ವಿನಕಾರಣ ಅಡ್ಡಿಪಡಿಸುತ್ತಿದ್ದಾರೆ, ಈ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ತಕ್ಷಣ ಕ್ರಕೈಗೊಂಡು ದಲಿತ ಮಹಿಳೆಗೆ ನ್ಯಾಯ ಒದಗಿಸಿಕೊಡದಿದ್ದಲ್ಲಿ ಕಡಬ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಆನಂದ ಬೆಳ್ಳಾರೆ ಎಚ್ಚರಿಸಿದರು.

ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಲಿತ ಮಹಿಳೆಗೆ 94 ಸಿ ಯೋಜನೆಯಲ್ಲಿ ಮಂಜೂರಾದ ಭೂಮಿಯಲ್ಲಿ ಇದ್ದ ಹಳೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಸಿದ್ದತೆ ನಡೆಸುವಾಗ ಸ್ಥಳಿಯರಾದ ಶೇಷಪ್ಪ ಗೌಡ ಮತ್ತು ವೀರಪ್ಪ ಗೌಡ ಅವರ ಮಕ್ಕಳು ಮಹಿಳೆಯ ಜಾಗವನ್ನು ಬಲತ್ಕಾರವಾಗಿ ಸ್ವಾಧೀನಪಡಿಸಿದ್ದಲ್ಲದೆ ಮನೆ ನಿರ್ಮಿಸಲು ಮಾಡಿದ ತಯಾರಿಯನ್ನು ಹಾಗೂ ಕೃಷಿಯನ್ನು ಧ್ವಂಸ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇನ್ಯ ಗ್ರಾಮದ ಬಿಳಿನಾಲೆ ಎಂಬಲ್ಲಿರುವ ಸ,ನಂ 37/2 ಬಿ ರಲ್ಲಿ 4.32 ಎಕ್ರೆ ಸರಕಾರಿ ಜಮೀನು ಇದ್ದು ಈ ಜಮೀನು ಮೀಸಲು ಅರಣ್ಯ, ನೆಡುತೋಪು, ಸರಕಾರಿ ಕಟ್ಟಡ ರಚನೆ ಹಾಗೂ ಸ್ಮಶಾನಗಳಿಗೆ ಕಾದಿರಿಸಿದ ಜಾಗವಾಗಿದೆ, ಇದನ್ನು ಶೇಷಪ್ಪ ಗೌಡ ಮತ್ತು ವೀರಪ್ಪ ಗೌಡ ಅವರ ಮಕ್ಕಳು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡು ದರ್ಖಾಸಿಗೆ ಅರ್ಜಿ ಸಲ್ಲಿಸಿದ್ದಾರೆ. ಹತ್ತಿರದ ಕಾವೇರಿಯವರಿಗೆ ಸ,ನಂ 112 ರಲ್ಲಿ ಮಂಜೂರಾದ ಮನೆ ನಿವೇಶನವನ್ನೂ ಕೂಡಾ ಸ್ವಾಧೀನಪಡಿಸಿಕೊಂಡು ಮನೆಕಟ್ಟುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೇನ್ಯ ಗ್ರಾಮದ ಗ್ರಾಮಕರಣಿಕರು ಹಾಗೂ ಗ್ರಾಮ ಸೇವಕರು ಬೆಂಬಲ ನೀಡುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದಾಗ ತನಿಖಾ ವರದಿಯಲ್ಲಿ ಆಕ್ರಮಿತ ಜಮೀನು ಸರಕಾರಿ ಉದ್ದೇಶಕ್ಕಾಗಿ ಕಾದಿರಿಸಿದ ಜಾಗವೆಂದು ತಿಳಿದು ಬಂದಿದೆ. ಆದುದರಿಂದ ಶೇಷಪ್ಪ ಗೌಡರು ಹಾಗೂ ವೀರಪ್ಪ ಮಕ್ಕಳು ಅಕ್ರಮ ಸಕ್ರಮಕ್ಕೆ ನೀಡಿರುವ ಅರ್ಜಿಯನ್ನು ತಿರಸ್ಕರಿಬೇಕು ಹಾಗೂ ದಲಿತ ಮಹಿಳೆಯ ಮನೆ ನಿವೇಶನವನ್ನು ಅವರ ಸುಪರ್ದಿಗೆ ನೀಡಲು ಆದೇಶ ನೀಡಬೇಕು, ಕಾನೂನು ಬಾಹಿರ ಅಕ್ರಮಕ್ಕೆ ತಡೆ ನೀಡಿ ಸೂಕ್ತ ತನಿಖೆ ನಡೆಸಿ, ಜಮೀನನ್ನು ತಕ್ಷಣ ತಹಸೀಲ್ದಾರು ತಮ್ಮ ವಶಕ್ಕೆ ಪಡೆಯುಲು ಆದೇಶಿಸಬೇಕು ತಪ್ಪಿದ್ದಲ್ಲಿ ಮಾರ್ಚ್ 1 ರಂದು ಕಡಬ ತಹಸೀಲ್ದಾರ್ ಕಛೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆನಂದ ಬೆಳ್ಳಾರೆ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿಯ ಸದಸ್ಯ ಗಿರೀಶ್ ಕಡಬ, ಸುಳ್ಯ ತಾಲೂಕು ಮುಖಂಡ ಅಚ್ಚುತ ಮಲ್ಕಜೆ, ಕಡಬ ಕಡಬ ತಾಲೂಕು ಮುಖಂಡರಾದ ವಸಂತ ಕುಬಲಾಡಿ, ಶಶಿಧರ ಬೊಟ್ಟಡ್ಕ ಹಾಗೂ ಗಿರಿಯಪ್ಪ ನಾಯ್ಕ ಉಪಸ್ಥಿತರಿದ್ದರು.

Leave a Reply

error: Content is protected !!