ರಬ್ಬರ್ ಮ್ಯಾಟ್ ಕಳ್ಳತನ; ಇಬ್ಬರ ಬಂಧನ

ಶೇರ್ ಮಾಡಿ

ನೆಲ್ಯಾಡಿ: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ನೆಲ್ಯಾಡಿ ಎಂಬಲ್ಲಿರುವ ಕ್ಲಾಸಿಕ್ ಬಾರ್ ಮತ್ತು ರೆಸ್ಟೋರೆಂಟ್ ನ ಹಿಂಬಾಗದ ಕಂಪೌಂಡು ಒಳಗಡೆ ಇಟ್ಟಿದ್ದ ಗ್ರೀನ್ ಬಣ್ಣದ 3 ರಬ್ಬರ್ ಮ್ಯಾಟ್ ಕಳ್ಳತನ ನಡೆದ ಬಗ್ಗೆ ಫೆಬ್ರವರಿ 20ರಂದು ವರದಿಯಾಗಿದೆ.
ನೆಲ್ಯಾಡಿ ಎಂಬಲ್ಲಿರುವ ಕ್ಲಾಸಿಕ್ ಬಾರ್ ಮತ್ತು ರೆಸ್ಟೋರೆಂಟ್ ನ ಹಿಂಬಾಗದ ಕಂಪೌಂಡು ಒಳಗಡೆ ಇಟ್ಟಿದ್ದ ಗ್ರೀನ್ ಬಣ್ಣದ 3ರಬ್ಬರ್ ಮ್ಯಾಟನ್ನು ಬೈಕ್ ಪಿಟ್ಟರ್ ಆದ ಸಿದ್ದೀಕ್ ಮತ್ತು ಆಟೋರಿಕ್ಷಾ ಚಾಲಕ ಸುನಿಲ್ ಎಂಬವರುಗಳು ಕಳ್ಳತನ ಮಾಡಿ, ಮಾರುತಿ ಓಮ್ನಿ ಕಾರು ಕೆಎ: 01- ಎಂಜೆ-3818 ರಲ್ಲಿ 3 ಮ್ಯಾಟನ್ನು ತುಂಬಿಸಿ ಇಟ್ಟಿರುವುದನ್ನು ನೋಡಿದ ಕ್ಲಾಸಿಕ್ ಬಾರ್ ಮತ್ತು ರೆಸ್ಟೋರೆಂಟ್ ನ ಸಿಬ್ಬಂದಿ ಎ.ಸಿ ಮನೋಜ್ ಕುಮಾರ್ ಆಪಾದಿತ ಸಿದ್ದಿಕ್ ನ್ನು ಹಿಡಿದುಕೊಂಡಾಗ ಇನ್ನೊರ್ವ ಅಪಾದಿತ ಸುನಿಲ್ ಎಂಬಾತನು ಓಡಿ ಪರಾರಿಯಾಗಿರುತ್ತಾನೆ.

ಬಳಿಕ ಈ ವಿಚಾರವನ್ನು ನೆಲ್ಯಾಡಿ ಹೊರಠಾಣೆಯ ಠಾಣಾಧಿಕಾರಿಯವರಾದ ಬಾಲಕೃಷ್ಣ ರವರಿಗೆ ತಿಳಿಸಿ ವಾಹನ ಸಮೇತ ವಶಪಡಿಸಿಕೊಳ್ಳಲಾಯಿತು. ಪರಾರಿಯಾದ ಆರೋಪಿ ಸುನಿಲ್ ನನ್ನು ಪೊಲೀಸರ ಸಹಾಯದಿಂದ ವಶಕ್ಕೆ ಪಡೆಯಲಾಯಿತು.
ಕಳ್ಳತನ ಮಾಡಿದ 3 ರಬ್ಬರ್ ಮ್ಯಾಟ್ ನ ಅಂದಾಜು ಮೌಲ್ಯ ರೂ:10,000/-
ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ನೆಲ್ಯಾಡಿ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಗಳಾದ ಬಾಲಕೃಷ್ಣ, ಕುಶಾಲಪ್ಪ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Reply

error: Content is protected !!