ಇಂಡಿಯನ್ ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ಮಾಹಿತಿ ಕಾರ್ಯಾಗಾರ

ಶೇರ್ ಮಾಡಿ

ಮಂಗಳೂರು: ಇಂಡಿಯನ್ ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್ ವತಿಯಿಂದ ದಿನಾಂಕ 26.2.2023 ರಂದು ಸಾಮಾನ್ಯ ಉದರ ಸಂಬಂಧಿ ಕಾಯಿಲೆಗಳು ಮತ್ತು ಅದರ ಹೋಮಿಯೋಪತಿ ಚಿಕಿತ್ಸೆ ವಿಷಯದ ಕುರಿತಾಗಿ ಮಾಹಿತಿ ಕಾರ್ಯಾಗಾರ ಹೋಟೆಲ್ ಸ್ಯಾಫ್ರಾನ್ ಮಂಗಳೂರು ಇಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸುತ್ತಾ ಮಾತನಾಡಿದ IHMA ರಾಷ್ಟ್ರೀಯ ಅಧ್ಯಕ್ಷರಾದ ರೋಷನ್ ಪಿಂಟೊ, ಹೋಮಿಯೋಪತಿ ವೈದ್ಯರೆಲ್ಲ ಐಹೆಚ್ಎಮ್ಎ ಸೇರಿ ವೈದ್ಯ ಪದ್ಧತಿಯ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಕೆಎಂಸಿ ಯ ವೈದ್ಯರಾದ ಡಾ.ರಂಜಿತ್ ರಾವ್ ಸಾಮಾನ್ಯ ಉದರ ಸಂಬಂಧಿ ಕಾಯಿಲೆಗಳ ಬಗ್ಗೆ ಮಾಹಿತಿ ನೀಡಿದರು.
ಬಿಸಿ ರೋಡಿನ ವೈದ್ಯರಾದ ಡಾ.ಅವಿನಾಶ್ ಉದರ ಸಂಬಂಧಿ ಕಾಯಿಲೆಗಳಲ್ಲಿ ಹೋಮಿಯೋಪತಿ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.

ಐ ಎಚ್ ಎಮ್ ಎ ಎನ್ ಡಬ್ಲ್ಯೂ ಸಿ ಮೆಂಬರ್ ಡಾ. ಪ್ರವೀಣ್ ರಾಜ ಆಳ್ವ, ಐ ಹೆಚ್ ಎಂ ಎ ಸ್ಟೇಟ್ ಸೆಕ್ರೆಟರಿ ಡಾ. ಪ್ರವೀಣ್ ರೈ, ಐ ಹೆಚ್ ಎಂ ಎ ಮಂಗಳೂರು ಸೆಕ್ರೆಟರಿ ಡಾ.ತ್ರಿವೇಣಿ ಬಂಗೇರ, ಖಜಾಂಚಿ ಡಾ.ಅನೀಶ್ ಕುಮಾರ್ ಸಾದಂಗಾಯ ಹಿರಿಯ ವೈದ್ಯರಾದ ಡಾ.ಎಸ್ ಕೆ ತಿವಾರಿ, ಡಾ.ಪ್ರಸನ್ನಕುಮಾರ್, ಡಾ. ಪ್ಸಾದ್ ನೆಲ್ಯಾಡಿ, ಡಾ.ಅಬ್ರಹಾಂ ಝಕಾರಿಯಸ್, ಡಾ.ಗ್ರೆಟ್ಟಾ ಲೋಬೊ, ಡಾ.ರಾಮಕೃಷ್ಣರಾವ್, ಡಾ.ಮನೋಹರ ಉಪಾಧ್ಯ ಹಾಗೂ ಮಂಗಳೂರಿನ ಹಲವು ಹೋಮಿಯೋಪತಿ ವೈದ್ಯರು ಉಪಸ್ಥಿತರಿದ್ದರು.

Leave a Reply

error: Content is protected !!