ರೈಲು ನಿಲ್ದಾಣದಲ್ಲಿ ಕಳ್ಳತನ : ಇಬ್ಬರು ಕಳ್ಳಿಯರನ್ನು ಬಂಧಿಸಿದ ಪೊಲೀಸರು

ಶೇರ್ ಮಾಡಿ

ಉಡುಪಿ : ಇಲ್ಲಿನ ಇಂದ್ರಾಳಿ ರೈಲು ನಿಲ್ದಾಣದಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು 8 ಗಂಟೆಗಳ ಒಳಗೆ ಭೇದಿಸಿರುವ ಪೊಲೀಸರು ಇಬ್ಬರು ಕಳ್ಳಿಯರನ್ನು ಚಿನ್ನಾಭರಣ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 14 ರಂದು ಮಂಗಳೂರು–ಮುಂಬಯಿ ಎಕ್ಸ್ ಪ್ರೆಸ್ ರೈಲಿನಲ್ಲಿ ಕಾಪುವಿನ ಕುತ್ಯಾರು ಮೂಲದ ಕುಟುಂಬ ಪ್ರಯಾಣಿಸಲು ರೈಲು ಹತ್ತಿದಾಗ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ ಕಳವಾಗಿತ್ತು. ಈ ಕುರಿತು ಮಣಿಪಾಲ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 4 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನಾಭರಣ 3 ಸಾವಿರ ಮೌಲ್ಯದ ವಾಚ್ ಬ್ಯಾಗ್ ನಿಂದ ಎಗರಿಸಲಾಗಿತ್ತು.

ಕಾರ್ಯಾಚರಣೆ ನಡೆಸಿದ ಮಣಿಪಾಲ ಠಾಣೆ ಪೊಲೀಸರು ಕೃತ್ಯ ನಡೆಸಿದ 8 ಗಂಟೆಗಳ ಒಳಗೆ ಚಿನ್ನಾಭರಣ ಸಹಿತ ಆರೋಪಿಗಳಾದ ಲಲಿತಾ ಭೋವಿ(41) ಮತ್ತು ಸುಶೀಲಮ್ಮ ಭೋವಿ (64) ಎನ್ನುವವರನ್ನು ಬಂಧಿಸಿದ್ದಾರೆ. ಇಬ್ಬರೂ ಭದ್ರಾವತಿಯ ಹನೂಮಂತ ನಗರ ನಿವಾಸಿಗಳಾಗಿದ್ದಾರೆ.
ಇಬ್ಬರು ಈ ಹಿಂದೆಯೂ ಕಳ್ಳತನದ ಚಳಿ ಬೆಳೆಸಿಕೊಂಡಿದ್ದು ಹೊನ್ನಾಳಿ ತಾನೇ ಸೇರಿ ಇತರೆಡೆಯೂ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಮಣಿಪಾಲ ಠಾಣೆಯ ಸಿಬಂದಿಗಳಾದ ಪಿಎಸೈ ನವೀನ ನಾಯ್ಕ್, ಎಎಸೈ ಶೈಲೇಶ್, ಹೆಡ್ ಕಾನ್ಸ್ಟೇಬಲ್ ಇಮ್ರಾನ್, ಶುಭ ಮತ್ತು ಅರುಣಾ ಚಾಳೇಕರ್ ಅವರು ಭಾಗಿಯಾಗಿದ್ದರು. ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!