ಪೊದೆಯಲ್ಲಿ ದೇವರ ವಿಗ್ರಹಗಳು ಪತ್ತೆ

ಶೇರ್ ಮಾಡಿ

ಮಂಗಳೂರು:ನಗರದ ಪಂಪ್‌ವೆಲ್‌-ಕುದ್ಕೋರಿ ಗುಡ್ಡೆ ಮುಖ್ಯರಸ್ತೆಯ ಕುರುಚಲು ಗಿಡಗಳ ಪೊದೆಯ ನಡುವೆ ಪ್ಲಾಸ್ಟಿಕ್‌ ಚೀಲದಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ.

ಶಾರದೆಯ ಸುಮಾರು 2.5 ಇಂಚು ಉದ್ದದ ಮತ್ತು 1 ಇಂಚು ಉದ್ದದ, ಗಣಪತಿಯ ಸುಮಾರು 1 ಇಂಚು ಉದ್ದದ, ಲಕ್ಷ್ಮೀ ದೇವಿಯ ಸುಮಾರು 2 ಇಂಚು ಉದ್ದದ, ಶಾರದಾ ದೇವಿಯ ಸುಮಾರು 1 ಇಂಚು ಉದ್ದದ, ಹಿತ್ತಾಳೆಯ ನಂದಿಯ 1 ಇಂಚು ಉದ್ದದ, ಕಂಚಿನ ದತ್ತಾತ್ರೇಯ ದೇವರ 6 ಇಂಚು ಉದ್ದ ಹಾಗೂ ಹಿತ್ತಾಳೆಯ ನಾಗದೇವರ 2 ಇಂಚು ಉದ್ದದ ವಿಗ್ರಹಗಳಿದ್ದು, ವಾರಸುದಾರರು ದಾಖಲೆಗಳೊಂದಿಗೆ ಮಂಗಳೂರು ಪೂರ್ವ ಪೊಲೀಸ್‌ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

See also  ಬೆಳ್ಳಾರೆ: “ಪ್ರವೀಣ್‌’ ಗೃಹ ಪ್ರವೇಶ, ಪುತ್ಥಳಿ ಅನಾವರಣ

Leave a Reply

Your email address will not be published. Required fields are marked *

error: Content is protected !!