ಅರಸಿನಮಕ್ಕಿ : ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಿಯೂ ನೇರ ಹಣದ ವ್ಯವಹಾರವಿಲ್ಲದೆ ಜನರು ವ್ಯವಹರಿಸುತ್ತಿದ್ದಾರೆ. ಆದರೆ ಇದಕ್ಕೊಂದು ಅಪವಾದ ಎಂಬಂತೆ ಹತ್ಯಡ್ಕ, ಅರಸಿನಮಕ್ಕಿ, ಶಿಶಿಲ, ಶಿಬಾಜೆ, ರೆಖ್ಯಾ, ಕಳಂಜ ಗ್ರಾಮದ ಜನತೆಗೆ ಇನ್ನು ಎಟಿಎಂ ವ್ಯವಹಾರದ ಅವಕಾಶ ದೊರೆತಿಲ್ಲ. ವ್ಯವಹಾರಕ್ಕಾಗಿ ಎಟಿಎಂ ನೊಂದಿಗೆ ದೂರದ ಕೊಕ್ಕಡಕ್ಕೆ ಪ್ರಯಾಣಿಸಬೇಕಾಗಿದೆ.
ಈ ಕುರಿತು ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿ ಬ್ಯಾಂಕುಗಳು ಇದ್ದು ರೈತರು, ಮಹಿಳೆಯರು, ವಿದ್ಯಾರ್ಥಿಗಳು, ವ್ಯವಹರಿಸುತ್ತಿದ್ದು, ಎಟಿಎಂ ಕಾರ್ಡ್ ಕೂಡ ನೀಡಿರುತ್ತಾರೆ ಆದರೆ ಅದು ಉಪಯೋಗಕ್ಕೆ ಇಲ್ಲದಂತಾಗಿದೆ.
ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಬ್ಯಾಂಕ್ ಅಧಿಕಾರಿಗಳು ಕೇಂದ್ರ ಸ್ಥಾನವಾದ ಅರಸಿನಮಕ್ಕಿಯಲ್ಲಿ ಸಾರ್ವಜನಿಕರ ವ್ಯವಹಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಎಟಿಎಂ ವ್ಯವಸ್ಥೆಯನ್ನು ಒದಗಿಸುವಂತೆ ಒತ್ತಾಯಿಸಿದ್ದಾರೆ.