ಕೃಷಿ ತೋಟಕ್ಕೆ ಆನೆ ದಾಳಿ;ಅಪಾರ ಪ್ರಮಾಣದಲ್ಲಿ ಕೃಷಿಗೆ ಹಾನಿ

ಶೇರ್ ಮಾಡಿ

ಅರಸಿನಮಕ್ಕಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕೊಕ್ಕಡ-ಅರಸಿನಮಕ್ಕಿ ರಸ್ತೆಯ ಹೊಸ್ತೋಟ ವಾಳ್ಯದ ಶಂಕರ ಜೋಶಿ ಎಂಬವರ ತೋಟಕ್ಕೆ ಶನಿವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ 25 ಅಡಕೆ ಗಿಡ, 60 ಬಾಳೆ, ಒಂದು ತೆಂಗಿನ ಮರ, ಸುಮಾರು 25ರಷ್ಟು ಇತರ ನೆರಳು ಕೊಡುವ ಮರಗಳನ್ನು ಧ್ವಂಸ ಮಾಡಿವೆ. ಅಲ್ಲದೆ ತೂಟದ ನೀರಾವರಿಯ ಪೈಪ್ ಲೈನ್, 15ಕ್ಕಿಂತ ಅಧಿಕ ಸ್ಪ್ರಿಂಕ್ಲರ್ ಪಾಯಿಂಟ್ ಗಳಿಗೆ ಹಾನಿ ಉಂಟುಮಾಡಿವೆ.

ಮನೆಯ ಸಮೀಪದವರೆಗೂ ಆಗಮಿಸಿದ ಕಾಡಾನೆಗಳು ಬಳಿಕ ಪರಿಸರದಲ್ಲಿ ತಿರುಗಾಟ ನಡೆಸಿವೆ. ಹೆಜ್ಜೆಗಳ ಆಧಾರದಲ್ಲಿ ಒಂದು ದೊಡ್ಡ ಆನೆ ಹಾಗೂ ಒಂದು ಸಣ್ಣ ಆನೆ ಬಂದಿರುವ ಶಂಕೆ ವ್ಯಕ್ತವಾಗಿದೆ.

Leave a Reply

error: Content is protected !!