ಕಡಬ:  ಒರಂಬಾಲು ಹಾಗೂ ಕಲ್ಲುಗುಡ್ಡೆ ಎಸ್.ಕಾಲೋನಿ ರಸ್ತೆಗಳ ಕಾಮಗಾರಿಗೆ ಸಚಿವ ಎಸ್.ಅಂಗಾರ ರಿಂದ ಗುದ್ದಲಿ ಪೂಜೆ

ಶೇರ್ ಮಾಡಿ

ಕಡಬ: ನೂಜಿಬಾಳ್ತಿಲ ಗ್ರಾಮದಲ್ಲಿ ರೂ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಉರುಂಬಾಲು ರಸ್ತೆ ಹಾಗೂ ರೂ 10 ಲಕ್ಷ ವೆಚ್ಚದಲ್ಲಿ ಕಲ್ಲುಗುಡ್ಡೆ ಎಸ್.ಕಾಲೋನಿ ರಸ್ತೆಗಳ ಕಾಮಗಾರಿಗಳಿಗೆ ಸಚಿವರಾದ ಎಸ್. ಅಂಗಾರರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಮಾಜಿ ಜಿ.ಪಂ.ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ, ಸದಸ್ಯರಾದ ಚಂದ್ರಶೇಖರ ಹಳೆನೂಜಿ, ವಿನಯಚಂದ್ರ ಬಳಕ್ಕ, ವಿಜಯಲಕ್ಷ್ಮಿ ಅರಿಮಜಲು, ಜಯಂತ ಬರಮೇಲು, ಚಂದ್ರಾವತಿ ಜಾಲು ಪ್ರಮುಖರಾದ ಉಮೇಶ್ ಸಾಯಿರಾಂ, ಲತೀಶ್ ಕಂಪ, ಮೋನಪ್ಪ ಗೌಡ, ಕುಶಾಲಪ್ಪ, ದೇಜ ಪೂಜಾರಿ, ಶ್ರೀಧರ ಇನ್ನಿತರರು ಉಪಸ್ಥಿತರಿದ್ದರು.

See also  ನೆಲ್ಯಾಡಿ: ಸಾಫಿಯೆನ್ಶಿಯ ಬೆಥನಿ ಪ್ರಥಮ ದರ್ಜೆ ಕಾಲೇಜು ಎನ್ ಎಸ್ ಎಸ್ ಶಿಬಿರ

Leave a Reply

Your email address will not be published. Required fields are marked *

error: Content is protected !!