ಮಂಗಳೂರು: ಐಸ್ ಕ್ರೀಮ್ ದಾಸ್ತಾನು ಕೇಂದ್ರದಲ್ಲಿ ಭಾರೀ ಬೆಂಕಿ ಅವಘಡ: ಅಪಾರ ನಷ್ಟ

ಶೇರ್ ಮಾಡಿ

ಮಂಗಳೂರು: ನಗರ ಹೊರವಲಯದ ಅಡ್ಯಾರ್ ನಲ್ಲಿರುವ ಐಸ್ ಕ್ರೀಮ್ ದಾಸ್ತಾನು ಕೇಂದ್ರವೊಂದರಲ್ಲಿ ಸೋಮವಾರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಾಶನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.

ಅಡ್ಯಾರ್ ನಲ್ಲಿರುವ ಪೋಲಾರ್ ಐಸ್ ಕ್ರೀಂ ಸ್ವಾಕಿಸ್ಟ್ ಎಂಬ ನಂದಿನಿ ಐಸ್ ಕ್ರೀಂ ದಾಸ್ತಾನು ಕೇಂದ್ರದಲ್ಲಿ ಸೋಮವಾರ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಈ ಅವಘಡ ಸಂಭವಿಸಿದೆ. ಈ ವೇಳೆ ದಾಸ್ತಾನು ಕೇಂದ್ರದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಲಾರಿ ಸಹಿತ ಎರಡು ವಾಹನಗಳು ‌ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ.

ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರಬಹುದೆಂದು ಶಂಕಿಸಲಾಗಿದೆ.

ಮೂರು ಅಗ್ನಿಶಾಮಕ ವಾಹನಗಳು ಸುಮಾರು 4 ಗಂಟೆಗಳ ಅವಿರತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದವು.

Leave a Reply

error: Content is protected !!