ಕೊಕ್ಕಡದ ಸಂತ ಜಾನ್ ಬ್ಯಾಪ್ಟೀಸ್ಟ್ ಚರ್ಚಿನಲ್ಲಿ ಗರಿಗಳ ಹಬ್ಬ

ಶೇರ್ ಮಾಡಿ

ಕೊಕ್ಕಡದ ಸಂತ ಜಾನ್ ಬ್ಯಾಪ್ಟೀಸ್ಟ್ ಚರ್ಚಿನಲ್ಲಿ ಗರಿಗಳ ಹಬ್ಬವು ವಿಜೃಂಭಣೆಯಿಂದ ನಡೆಯಿತು.

ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾದರ್ ಜಗದೀಶ್ ಪಿಂಟೋ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ವಂದನೀಯ ಫಾದರ್ ಅಶೋಕ್ ಡಿಸೋಜಾ ಹಾಗೂ ಚರ್ಚಿನ ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡರು.

ಪೂಜೆ ಆರಂಭಕ್ಕೂ ಮೊದಲು ಭಕ್ತಾದಿಗಳಿಗೆ ತೆಂಗಿನ ಗರಿಗಳನ್ನು ಆಶೀರ್ವಾದದ ರೂಪವಾಗಿ ನೀಡಲಾಯಿತು. ಬಳಿಕ ಮೆರವಣಿಗೆಯ ಮೂಲಕ ಚರ್ಚಿನ ಒಳಗೆ ಪ್ರವೇಶಿಸಲಾಯಿತು.

Leave a Reply

error: Content is protected !!