ರಾಷ್ಟ್ರಪತಿಗಳಿಂದ ಪದ್ಮಭೂಷಣ ಸ್ವೀಕರಿಸಿದ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆ ಸುಧಾಮೂರ್ತಿ

ಶೇರ್ ಮಾಡಿ

ನವದೆಹಲಿ: ಇನ್ಫೋಸಿಸ್‌ ಸಂಸ್ಥೆ ಸಹ ಸಂಸ್ಥಾಪಕಿ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಅಧ್ಯಕ್ಷೆಯಾದ ಸುಧಾಮೂರ್ತಿಯವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಲ್ ಬೈರಪ್ಪ ಎಂಎಂ ಕೀರವಾಣಿ ಸೇರಿದಂತೆ 54 ಮಂದಿ ಸಾಧಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪದ್ಮ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. 106 ಮಂದಿ ಪ್ರಶಸ್ತಿ ವಿಜೇತರ ಪೈಕಿ ಎರಡನೇ ಹಂತದಲ್ಲಿ 54 ಮಂದಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

ಸುಧಾಮೂರ್ತಿಯವರ ಸಾಮಾಜಿಕ ಕಳಕಳಿ, ಶಿಕ್ಷಣ ಕ್ಷೇತ್ರದ ಸೇವೆಗೆ ಮೆಚ್ಚಿ ಕೇಂದ್ರ ಸರ್ಕಾರವು ಕೆಲ ತಿಂಗಳ ಹಿಂದೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿತ್ತು. ಗುರುವಾರ ನವದೆಹಲಿಯ ರಾಷ್ಟ್ರಪತಿಭವನದಲ್ಲಿ ನಡೆದ ಪದ್ಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಸುಧಾಮೂರ್ತಿಯವರಿಗೆ ನೀಡಿ ಗೌರವಿಸಿದರು.
ಪ್ರಶಸ್ತಿ ಸ್ವೀಕರಿಸಲು ತೆರಳಿದ ಸುಧಾಮೂರ್ತಿಯವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ನಮಸ್ಕಾರ ಮಾಡಿ ಆನಂತರ ರಾಷ್ಟ್ರಪತಿಗಳ ಬಳಿ ತೆರಳಿ ಪ್ರಶಸ್ತಿ ಫಲಕವನ್ನು ಸ್ವೀಕರಿಸಿದರು.

See also  ಕಲ್ಲಂಡ ಪ್ರದೇಶದಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿದ ಯುವ ತೇಜಸ್ಸು ಟ್ರಸ್ಟ್

Leave a Reply

Your email address will not be published. Required fields are marked *

error: Content is protected !!