ರೆಖ್ಯ: ತಮ್ಮನಿಂದ ಅಣ್ಣನಿಗೆ ಕತ್ತಿಯಿಂದ ಹಲ್ಲೆ

ಶೇರ್ ಮಾಡಿ

ರೆಖ್ಯ: ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮದ ಪರಕ್ಕಳ ಎಂಬಲ್ಲಿ ಎ. 5 ರಂದು ರಾತ್ರಿ ತಮ್ಮ ಅಣ್ಣನಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಬಗ್ಗೆ ವರದಿಯಾಗಿದೆ.

ಅಣ್ಣ ತಮ್ಮರಿಬ್ಬರು ಒಂದೇ ಮನೆಯಲ್ಲಿ ವಾಸವಿದ್ದು, ನಿನ್ನೆ ರಾತ್ರಿ ಇವರಿಬ್ಬರೊಳಗೆ ಜಗಳ ನಡೆದು ಪ್ರಕಾಶ್ (ವ.48) ಎಂಬುವರು ಅಣ್ಣ ರಾಜಶೇಖರ್(ವ.56) ಎಂಬುವರಿಗೆ ಕತ್ತಿಯಿಂದ ಹಲ್ಲೆ ಮಾಡಿರುತ್ತಾನೆ. ಹಲ್ಲೆಗೊಳಗಾದಾತ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಯನ್ನು ಪಡೆಯುತ್ತಿದ್ದಾರೆ.

ಆರೋಪಿ ಪ್ರಕಾಶ ಈ ಹಿಂದೆ ಎರಡು ಬಾರಿ ಜೈಲಿಗೆ ಹೋಗಿ ಬಂದಿರುತ್ತಾನೆ ಎಂದು ತಿಳಿದು ಬಂದಿದೆ

Leave a Reply

error: Content is protected !!