ಕಾರ್ಕಳ: ಕಾರ್ಕಳ ತಾಲೂಕಿನ ಕಾಂತಾವರ ಸಿರಿ ಜಾತ್ರೆಯಲ್ಲಿ ಕ್ರೈಸ್ತ ಸಮುದಾಯದ ಯುವಕ ವಿಕ್ಟರ್ ನೊರೋನ್ಹ ನಂದಿ ಹಿಡಿಯುವ ದೇವರ ಸೇವೆಗೆ ಹದಿನೈದು ವರ್ಷ ಸಂದಿದೆ. ಈ ಮೂಲಕ ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ ದೇವರನ್ನು ಕಾಣುತ್ತಿದ್ದಾರೆ ನಂದಳಿಕೆಯಿಂದ ನಾಡಿಗೆ ನಿರಂತರ ಧಾರ್ಮಿಕ ಸಾಮರಸ್ಯದ ಸಂದೇಶ ನೀಡುತ್ತಿದ್ದಾರೆ.
ನಂದಳಿಕೆ ಸಿರಿ ಜಾತ್ರೆ ಎಂದರೆ ಅಲ್ಲೊಂದು ವಿಶೇಷತೆ, ವಿನೂತನ ಯೋಚನೆ ಇದ್ದೆ ಇದೆ. ವಿಶೇಷ ಪ್ರಚಾರ ಫಲಕ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆಯಿಂದ ನಂದಳಿಕೆ ಸಿರಿಜಾತ್ರೆ ನಾಡಿನ ಉದ್ದಗಲಕ್ಕೂ ಪ್ರಸಿದ್ಧಿ ಪಡೆದಿದ್ದರೆ, ಸರ್ವಧರ್ಮೀಯರೂ ಇಲ್ಲಿನ ದೇವರ ಸೇವೆಯಲ್ಲಿ ತೊಡಗಿಸಿಕೊಂಡಿರುವು ಮತ್ತೂಂದು ವಿಶೇಷತೆ.
ನಂದಳಿಕೆಯ ಜಾತ್ರೆ ಹಾಗೂ ದೇವರ ಬಲಿ ಪೂಜೆ ಸಂದರ್ಭ ದೇವರ ನಂದಿ ಹಿಡಿಯುವುದು ಇದೇ ನಂದಳಿಕೆ ಗ್ರಾಮದ ಕಂಪೊಟ್ಟು ಎಂಬಲ್ಲಿಯ ಕ್ರೈಸ್ತ ಯುವಕ. 23ರ ವಯಸ್ಸು ಇದ್ದಾಗ ನಂದಿ ಹಿಡಿಯುವ ಸೇವೆ ಆರಂಭಿಸಿ ಇಂದಿನ ವರೆಗೆ ಸುಮಾರು 15 ವರ್ಷಗಳ ಕಾಲ ಈ ಸೇವೆಯನ್ನು ನಿಷ್ಠೆಯಿಂದ ಮಾಡುತ್ತ ಬಂದಿದ್ದಾರೆ.
ನಂದಳಿಕೆ ಶ್ರೀಕಾಂತ್ ಭಟ್ ಅವರ ನಂದಿಯನ್ನು ತಂದು ತಾವೇ ಸ್ವತಃ ಸಾಕುತ್ತಿದ್ದು, ಇನ್ನೊಂದು ಕರುವಿನ ಜತೆಗೆ ಚಂದ್ರಶೇಖರ ರಾವ್ ಎಂಬವರಿಂದ ಪಡೆದ ನಂದಿಯನ್ನು ತಂದು ಸಾಕುತ್ತಿದ್ದಾರೆ. ಉತ್ಸವಗಳಿಗೆ ಈ ಮೂರರ ಪೈಕಿ ಒಂದೊಂದನ್ನು ಕರೆದೊಯ್ದು ದೇವರ ಸೇವೆ ನೀಡುವುದು ನೊರೋನ್ಹರ ವಿಶೇಷತೆ. ಕಂಬಳ ಪ್ರಿಯರೂ ಆಗಿರುವ ಇವರ ಮನೆಯಲ್ಲಿ 7 ಕೋಣ, 3 ನಂದಿಗಳಿವೆ. ಸಿರಿ ಜಾತ್ರೆಯಲ್ಲಿ ವಿಕ್ಟರ್ ನೊರೋನ್ಹ ದೇವಾಲಯದ ಶುಚಿತ್ವ, ಇನ್ನಿತರ ಕರ ಸೇವೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ತಳಿರು ತೋರಣ ಕಟ್ಟುವ ಕೆಲಸದಲ್ಲೂ ಅವರು ಭಾಗಿಯಾಗುತ್ತಾರೆ. ದೇವರ ಬಲಿ ಸೇವೆಯಲ್ಲಿ ಬಲಿ ಮೂರ್ತಿಯ ಎದುರು ನಂದಿ ಹಿಡಿಯುವ ಕಾಯಕ ಮಾಡುತ್ತಿದ್ದಾರೆ. ಸರ್ವಧರ್ಮ ಸಮನ್ವಯ ಕೇಂದ್ರ ನಂದಿ ಹಿಡಿಯುವ ಕಾಯಕದಲ್ಲಿ ವಿಕ್ಟರ್ ನೊರೋನ್ಹ ತೊಡಗಿಕೊಂಡರೆ.