ಶಿಶಿಲ: ಕರ್ಮ ಭೂಮಿ, ಜ್ಞಾನ ಭೂಮಿಯಲ್ಲಿ ಭಗವಂತನ ಅವತಾರವಾಯಿತು. ಭಗವಂತ ಭಕ್ತರ ನಂಬಿಕೆಯಲ್ಲಿ ವಾಸಿಸುತ್ತಾನೆ ಅಂತಹ ಭಗವಂತ ಶ್ರೀರಾಮ ಸೇವಕ ಹನುಮಂತ.ಎಲ್ಲಿ ರಾಮನೊ ಅಲ್ಲಿ ಹನುಮ ಎಲ್ಲಿ ಹನುಮನೊ ಅಲ್ಲಿ ರಾಮ. ಕಪಿಗಳು ರಾಮ ನಾಮದಿಂದ ಉದ್ದಾರವಾದವು. ಸ್ವಾಮಿ ಭಕ್ತಿಗೆ ಹನುಮಂತ ಉತ್ತಮ ಉದಾಹರಣೆ. ಜೀವನ ಸಾಗರವನ್ನು ದಾಟಲು ಹನುಮ ಸ್ಮರಣೆ ಪೂರಕ. ಅಂತಹ ಶಕ್ತಿಯನ್ನು ನಾವೆಲ್ಲಾ ಈದಿನ ಭಕ್ತಿಯಿಂದ ಸ್ಮರಿಸುತ್ತಿದ್ದೆವೆ ಎಂದು ಹಿರಿಯ ವಿದ್ವಾಂಸರೂ, ಜ್ಯೊತಿಷಿಗಳೂ ಆದ ದಾವಣಗೆರೆಯ ವೆ.ಬ್ರಹ್ಮ ಶ್ರೀ ರಾಘವೇಂದ್ರ ಆಚಾರ್ಯ ಶುಭಾಶಯ ನುಡಿದರು.
ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ ಹನುಮ ಜಯಂತಿ ಆಚರಣೆಯಲ್ಲಿ ಅವರು ಅಶೀರ್ವಚನ ನೀಡಿದ್ದರು.
ಇದೊಂದು ಅಪರೂಪದ ಕಾರ್ಯಕ್ರಮ. ಪ್ರತೀವರ್ಷ ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿಯಂದು ಭಜನೆ, ಅನ್ನದಾನ, ರಾಮಾಯಣ ಗ್ರಂಥ ಪೂಜೆ, ರಾಮಾಯಣ ಕಥೆ ನಿರಂತರ ನಡೆದುಕೊಂಡು ಬರುತ್ತಿದೆ. ಹನುಮ ಜಯಂತಿಯ ಈರೀತಿಯ ಕಾರ್ಯಕ್ರಮ ನಾನು ಪ್ರಥಮ ಬಾರಿ ನೋಡುತ್ತಿದ್ದೇನೆ. ಧಾರ್ಮಿಕ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಿರುವ ಈ ಮನೆಯ ಸೇವಾ ಕಾರ್ಯಕ್ಕೆ ಅಭಿನಂದನೆ. ಎಂದು ವೆ.ಮೂ ಶ್ರೀ ರಾಘವೇಂದ್ರ ಆಚಾರ್ಯ ನುಡಿದರು.
ಕಾರ್ಯಕ್ರಮ ಉದ್ಘಾಟನೆಯನ್ನು ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರಾದ ಶೇಖರ ನಾರಾವಿ ಉದ್ಘಾಟಿಸಿ ಮಕ್ಕಳಲ್ಲಿ ಧಾರ್ಮಿಕ ಭಾವನೆ ಮಾಡುವಲ್ಲಿ ಭಜನೆ ಪೂರಕ ಎಂದು ನುಡಿದರು.
ಮಖ್ಯ ಅಥಿತಿಗಳಾಗಿ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೆಶಕರಾದ ರಾಘವೇಂದ್ರ ಇವರು ಆಶಯ ನುಡಿಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಘವೇಂದ್ರ ಕಿಗ್ಗ, ಶ್ರೀನಿವಾಸ ಮೂಡೆತ್ತಾಯ. ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಹಿರಿಯ ಭಜನಾ ತರಬೇತಿದಾರರಾದ ರಾಮಕೃಷ್ಣ ಕಾಟುಕುಕ್ಕೆ ದಂಪತಿಗಳನ್ನು ಜಯರಾಮ ನೆಲ್ಲಿತ್ತಾಯರ ಮನೆಯ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಬಿಳಿನೆಲೆ ಗೋಪಾಲ ಕೃಷ್ಣ ಮಹಿಳಾ ಮತ್ತು ಪುರುಷ ಭಜನಾ ಮಂಡಳಿ ಮತ್ತು ಅರಸಿನಮಕ್ಕಿ ಮಕ್ಕಳ ಭಜನಾ ಮಂಡಳಿಯ ಸದಸ್ಯರು ಆಕರ್ಷಕ ಕುಣಿತ ಭಜನೆ ನೆರವೆರಿಸಿದ್ದರು.
ಶ್ರೀಮತಿ ಅಮಿತಾ ದನಂಜಯ ಪ್ರಾರ್ಥಿಸಿ, ಬಿ.ಜಯರಾಮ ನೆಲ್ಲಿತ್ತಾಯ ಮನೆಗೆ ಬಂದ ಭಕ್ತಾದಿಗಳನ್ನು ಸ್ವಾಗತಿಸಿದರು. ಶ್ರೀಮತಿ ನಾಗಮಣಿ ರವಿ ಅವರಿಂದ ಶಂಖ ನಾದದೊಂದಿಗೆ ಭಜನೆ ಪ್ರಾರಂಭವಾಯಿತು, ಸೊಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಪ್ರೀತಿಕಾ ಯಶಸ್ ಧನ್ಯವಾದ ನೀಡಿದರು
ಭಜನೆ, ಹನುಮ ಪೂಜೆ, ರಾಮಾಯಣ ಗ್ರಂಥ ಪೂಜೆ, ಕುಣಿತ ಭಜನೆಯಲ್ಲಿ ಕಾರ್ಯಕ್ರಮ ಅತ್ಯಂತ ಭಕ್ತಿ ಪೂರಕವಾಗಿ ನೆರವೇರಿತು.