ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ವ್ಯಾಪ್ತಿ, ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯರಿಗೆ “ಭಜನಾ ಭಾಸ್ಕರ” ಪ್ರಶಸ್ತಿ

ಶೇರ್ ಮಾಡಿ

ಶಿಶಿಲ: ಶಿವಕೀರ್ತಿ ನಿಲಯ ಶಿಶಿಲದಲ್ಲಿ ನಡೆದ ಹನುಮ ಜಯಂತಿ ಆಚರಣೆಯಲ್ಲಿ ಅವರು ಅಶೀರ್ವಚನ ನೀಡಿ, ಜಯರಾಮ ನೆಲ್ಲಿತ್ತಾಯರ ಧಾರ್ಮಿಕ ಸೇವಾ ಕಾರ್ಯ ಗುರುತಿಸಿದ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೆಶಕರಾದ ವೆ.ಬ್ರಹ್ಮ ರಾಘವೇಂದ್ರ ಆಚಾರ್ಯ ಮತ್ತು ರಾಘವೇಂದ್ರ ಮಾದಾಪುರ ಇವರು ಹನುಮ ‌ಜಯಂತಿ ಶುಭ ಸಂಧರ್ಭದಲ್ಲಿ ಬಿ.ಜಯರಾಮ ನೆಲ್ಲಿತ್ತಾಯರಿಗೆ ತಮ್ಮ ಸಂಸ್ಥೆ ವತಿಯಿಂದ “ಭಜನಾ ಭಾಸ್ಕರ” ಎಂಬ ಪ್ರಶಸ್ತಿ ನೀಡಲಾಗುವುದೆಂದು ಪ್ರಸ್ತಾಪವನ್ನು ಮಂಡಿಸಿದರು.

ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 38 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸುತ್ತಿದ್ದು, ಇದೀಗ ರಾಮನಗರ, ಚಾಮರಾಜನಗರ, ಮಂಡ್ಯ, ಹಾಸನ, ಚನ್ನರಾಯಪಟ್ಟಣ, ಕೆಆರ್ ನಗರ, ಮೈಸೂರು, ಜಿಲ್ಲೆಯ ಏಳು ಜಿಲ್ಲೆಯೊಳಗೊಂಡ ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಸೇವಾ ಕಾರ್ಯದಲ್ಲಿ ಇವರನ್ನು ಗುರುತಿಸಲಾಗಿದೆ.

ಈ ಸಂದರ್ಭದಲ್ಲಿ ರಾಮಕೃಷ್ಣ ‌ಕಾಟುಕುಕ್ಕೆ, ಸುಂದರ ಬಿಳಿನೆಲೆ, ರಾಘವೇಂದ್ರ ಕಿಗ್ಗ, ಶ್ರೀನಿವಾಸ‌ ಮೂಡೆತ್ತಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು. ‌
ಇದೆ ಸಂಧರ್ಭದಲ್ಲಿ ಶ್ರೀ ಜಯರಾಮ ನೆಲ್ಲಿತ್ತಾಯ ದಂಪತಿಗಳನ್ನು ವಿಪ್ರ ಸಮೂಹ ಸಂಸ್ಥೆ ಬೆಂಗಳೂರು ವತಿಯಿಂದ ಅಭಿನಂದಿಸಲಾಗಿತ್ತು.

Leave a Reply

error: Content is protected !!