ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಕರ್ನಾಟಕ ಇವರ ಸೇವಾ ಯೋಜನೆಗೆ ಹಾಗೂ ಟ್ರಸ್ಟಿಗೆ ಗೌರವಾರ್ಪಣೆ

ಶೇರ್ ಮಾಡಿ

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟಿನ ಸಮಾಜಮುಖಿ ಕೆಲಸಳನ್ನು ಗುರುತಿಸಿ ರಾಮನಗರ ಫ್ರೆಂಡ್ಸ್ ಕಾಪು ಪಡು ಇದರ 20 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಟ್ರಸ್ಟಿನ ಗೌರವಾಧ್ಯಕ್ಷ ಉದಯ ಅರ್ಜುನಗುಳಿ ಹಾಗೂ ಕಾರ್ಯದರ್ಶಿ ಮನೋಹರ್ ಪಲಯಮಜಲು ಇವರನ್ನು ವೇದಿಕೆಯಲ್ಲಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿನ ಪೋಷಕರು ಹಾಗೂ ಆಪತ್ ಭಾಂದವ ಈಶ್ವರ್ ಮಲ್ಪೆಯವರನ್ನು ಗೌರವಿಸಲಾಯಿತು. ಕಾಪು ಶ್ರೀ ಮಾರಿಯಮ್ಮ ಅಮ್ಮನವರ ಮಾರಿ ಉತ್ಸವದ ಸಂದರ್ಭದಲ್ಲಿ ಹೃದಯ ಸಮಸ್ಯೆಯಿಂದ ಬಲಳುತ್ತಿರುವ ಧರ್ಮಪಾಲ ಇವರ ಚಿಕಿತ್ಸೆಗೆ ನೆರವಾಗಲು ರಾಮನಗರ ಫ್ರೆಂಡ್ಸ್ ಕಾಪು ಪಡು ಇವರ ಸಹಕಾರದಲ್ಲಿ ನಡೆಸಿದ ನಿಧಿ ಸಂಗ್ರಹ ಅಭಿಯಾನದಲ್ಲಿ ಒಟ್ಟಾದ ಮೊತ್ತವನ್ನು ವೇದಿಕೆಯಲ್ಲಿ ಹಸ್ತಾಂತರ ಮಾಡಲಾಯಿತು.

ಒಟ್ಟಾದ ಮೊತ್ತ 50,001 ರೂ ಚೆಕ್ಕನ್ನು ಗಣ್ಯರ ಉಪಸ್ಥಿಯಲ್ಲಿ ಆಪತ್ ಬಾಂಧವ ಈಶ್ವರ್ ಮಲ್ಪೆ ಹಾಗೂ ಸಚಿನ್ ಕಾಪು, ಟ್ರಸ್ಟಿನ ಪದಾಧಿಕಾರಿಗಳು ಫಲಾನುಭವಿ ಧರ್ಮಪಾಲ ಇವರಿಗೆ ನೀಡಿದರು.

Leave a Reply

error: Content is protected !!