“ಅಜ್ಜ-ಅಜ್ಜ ಕೊರಗಜ್ಜ” ಯಕ್ಷಗಾನ ಪ್ರದರ್ಶನ ||ಶ್ರೀ ಗಡಿಯಾಡಿ ಆದಿ ಮೊಗೆರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕ-ಕೊಕ್ಕಡ- ಕೌಕ್ರಾಡಿ||

ಶೇರ್ ಮಾಡಿ

ನೇಸರ ಜ.1:ಶ್ರೀ ಗಡಿಯಾಡಿ ಆದಿ ಮೊಗೆರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಲಡ್ಕ-ಕೊಕ್ಕಡ- ಕೌಕ್ರಾಡಿ ಇದರ ವತಿಯಿಂದ ದಿನಾಂಕ.30-12-2021ನೇ ಶುಕ್ರವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ. ದೇವಸ್ಥಾನದ ವಠಾರದಲ್ಲಿ “ಅಜ್ಜ-ಅಜ್ಜ ಕೊರಗಜ್ಜ” ಯಕ್ಷಗಾನ ಪ್ರದರ್ಶನಗೊಂಡಿತು.

ಯಕ್ಷಗಾನ ಪ್ರದರ್ಶನದ ಸೇವಾರ್ಥ ನಡೆದ ಅದೃಷ್ಟ ಚೀಟಿ ಡ್ರಾ ಫಲಿತಾಂಶವನ್ನು ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ,ಟ್ರಸ್ಟಿನ ಸದಸ್ಯ ವಿಶ್ವನಾಥ ಪಟ್ಲಡ್ಕ, ಹರೀಶ್ ಪಟ್ಲಡ್ಕ,ಮಹೇಶ್.ಪಿ,ಪ್ರಕಾಶ್.ರೈ,ರಾಮಣ್ಣ,ಚಂದ್ರ,ಸತೀಶ್,ನವೀನ್ ಪೂಜಾರಿ,ರಾಜೇಶ್,ಶಿವಣ್ಣ,ದೀಕ್ಷಾ ಅಂಚನ್ ನಡೆಸಿಕೊಟ್ಟರು.
ಅದೃಷ್ಟ ಚೀಟಿ ಮಾರಾಟಕ್ಕೆ ಸಹಕರಿಸಿದ ಪಲಾಶ್,ಯೋಗೀಶ್,ಪವನ್,ತನ್ವಿತ್,ಆದಿತ್ಯ, ರೇವಂತ್,ಗುರುಪ್ರಸಾದ್,ಕಿಶೋರ್ ಮತ್ತು ಅತಿ ಹೆಚ್ಚು ಅದೃಷ್ಟಚೀಟಿ ಮಾರಾಟ ಮಾಡಿದ ಪುನೀತರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು,ಭಗವದ್ಭಕ್ತರು ಪಾಲ್ಗೊಂಡರು ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ತನು-ಮನ-ಧನ ಗಳಿಂದ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಸಮರ್ಪಿಸಿ ಸುಧೀರ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಅದೃಷ್ಟಚೀಟಿಯ ಡ್ರಾ ಫಲಿತಾಂಶ:
ಪ್ರಥಮ ಬಹುಮಾನ – ನಂ. 856
ದ್ವಿತೀಯ ಬಹುಮಾನ – ನಂ.859
ತೃತೀಯ ಬಹುಮಾನ – ನಂ.881

Leave a Reply

error: Content is protected !!