ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ, ಮಾನವಿಕ ಸಂಘದ ಉದ್ಘಾಟನೆ ಮತ್ತು ಆರೋಗ್ಯ ಜಾಗೃತಿ ಕಾರ್ಯ ಶಿಬಿರ

ಶೇರ್ ಮಾಡಿ

ನೇಸರ ಜ.1: ನೆಲ್ಯಾಡಿಯ ವಿಶ್ವವಿದ್ಯಾನಿಲಯದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ ಮತ್ತು ಆರೋಗ್ಯ ಜಾಗೃತಿ ಕುರಿತು ಒಂದು ದಿನದ ಕಾರ್ಯಶಿಬಿರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಯೋಜಕರಾದ ಡಾ. ಜಯರಾಜ್.ಎನ್. ಅವರು ಮಾತನಾಡುತ್ತಾ ಕಾಲೇಜಿನ ಬೆಳವಣಿಗೆಗೆ ಮಾನವಿಕ ಸಂಘದ ಅವಶ್ಯಕತೆ ಮತ್ತು ಪ್ರಸ್ತುತ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಇರಬೇಕಾದ ಜಾಗೃತಿ ಕುರಿತು ಪ್ರಸ್ತಾಪಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಯಾಡಿಯ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ.ಎಮ್.ಪಿ ಅವರು ಪ್ರಾಥಮಿಕ ಚಿಕಿತ್ಸೆ ಮತ್ತು ಕೋವಿಡ್-19ರ ಕುರಿತು ಪವರ್ ಪಾಯಿಂಟ್ ಪ್ರೊಜೆಕ್ಟರ್ ಮೂಲಕ ಪ್ರಾಯೋಗಿಕವಾಗಿ ವಿಶೇಷ ಉಪನ್ಯಾಸ ನೀಡಿದರು. ಪ್ರಾಥಮಿಕ ಚಿಕಿತ್ಸೆಯ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಮಾನವಿಕ ಸಂಘದ ಸಂಚಾಲಕರಾದ ಡಾ.ಸೀತಾರಾಮ ಪಲ್ಲೋಡಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ವನಿತಾ.ಪಿ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.ಸುರೇಶ್.ಕೆ ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು,ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಡೀನಾ.ಪಿ. ಅವರು ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು

Leave a Reply

error: Content is protected !!