ನೆಲ್ಯಾಡಿ: “ನ್ಯೂ ರಾಜಸ್ಥಾನ್” ಗ್ರಾನೈಟ್ಸ್, ಮಾರ್ಬಲ್ಸ್, ಟೈಲ್ಸ್ ಶುಭಾರಂಭ

ಶೇರ್ ಮಾಡಿ

ನೇಸರ ಜ.1: ನ್ಯೂ ರಾಜಸ್ಥಾನ್ ಗ್ರಾನೈಟ್ಸ್, ಮಾರ್ಬಲ್ಸ್ ಮತ್ತು ಟೈಲ್ಸ್‌ಗಳ ಮಾರಾಟ ಮಳಿಗೆ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಬಳಿಯಿರುವ ಶಿಲ್ಪ ಆರ್ಕೇಡ್‌ನಲ್ಲಿ ಜ.1ರಂದು ಶುಭಾರಂಭಗೊಂಡಿತು.
ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಬಿನೋಯ್ ಜೋಸೆಫ್‌ರವರು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಜಾತಿ, ಭಾಷೆ, ಮತದ ಜನರು ಉದ್ದಿಮೆಗಳೊಂದಿಗೆ ವ್ಯವಹಾರ ನಡೆಸುತ್ತಾರೆ. ಉದ್ಯಮಗಳು ಊರಿನ ಸಾಮರಸ್ಯಕ್ಕೂ ಕಾರಣವಾಗಿದೆ.ಕೃಷಿಯೇತರ ಉದ್ದಿಮೆಗಳಿಂದ ಊರಿನ ಅಭಿವೃದ್ಧಿಯೂ ಆಗಲಿದೆ ಎಂದರು. ಸಂಸ್ಥೆಯ ಮಾಲಕ ಶೈಜುರವರು ಕಠಿಣ ಪರಿಶ್ರಮದಿಂದ ಈ ಹಂತಕ್ಕೆ ಬೆಳೆದಿದ್ದಾರೆ. ಸವಾಲಿನ ರೀತಿಯಲ್ಲಿ ಬಂಡವಾಳ ಹಾಕಿ ನೆಲ್ಯಾಡಿಯಲ್ಲಿ ದೊಡ್ಡ ಮಟ್ಟದ ವ್ಯವಹಾರ ಆರಂಭಿಸಿದ್ದಾರೆ. ಇಲ್ಲಿನ ಜನರು ನಗರಗಳಿಗೆ ಹೋಗುವ ಅವಶ್ಯಕತೆ ಇಲ್ಲ.ತಮಗೆ ಬೇಕಾದ ಗ್ರಾನೈಟ್ಸ್, ಮಾರ್ಬಲ್ಸ್, ಟೈಲ್ಸ್ ಇಲ್ಲಿಯೇ ಪಡೆಯಬಹುದಾಗಿದೆ. ಶೈಜುರವರ ಈ ಉದ್ಯಮ ಯಶಸ್ವಿಯಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್‌ರವರು ಮಾತನಾಡಿ, ಹೊಸ ವರ್ಷದ ಮೊದಲ ದಿನವೇ ಶೈಜುರವರು ಉದ್ದಿಮೆ ಆರಂಭಿಸಿದ್ದಾರೆ.ಅವರ ಈ ಉದ್ಯಮ ಯಶಸ್ವಿಯಾಗಿ ಮುನ್ನಡೆಯಲಿ. ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.ಇನ್ನೋರ್ವ ಅತಿಥಿ ನಿವೃತ್ತ ಲೆಕ್ಕಪರಿಶೋಧಕ ಎ.ಜೆ.ಜೋಸೆಫ್‌ರವರು ಮಾತನಾಡಿ, ಶೈಜುರವರು ಕಠಿಣ ಪರಿಶ್ರಮಿ. ವಹಿಸಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವವರು.ಅವರಲ್ಲಿ ದೃಢವಾದ ನಂಬಿಕೆಯೂ ಇದೆ. ದೇವರ ಅನುಗ್ರಹದಿಂದ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.

ನೆಲ್ಯಾಡಿ ಮಾತಾ ಲ್ಯಾಬ್‌ನ ಕೆ.ಜೆ.ಜೋಸ್‌ರವರು ಮಾತನಾಡಿ, ಮನೆಗಳಿಗೆ ಅತೀ ಅವಶ್ಯಕವಾಗಿರುವ ಗ್ರಾನೈಟ್, ಮಾರ್ಬಲ್ಸ್, ಟೈಲ್ಸ್‌ಗಳು ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಒಂದೇ ಸೂರಿನಡಿ ದೊರೆಯುವುದರಿಂದ ಜನರು ಬೇರೆ ಕಡೆಗೆ ಹೋಗಬೇಕಾಗಿಲ್ಲ. ಈ ಉದ್ಯಮ ನೆಲ್ಯಾಡಿಗೂ ಗರಿಮೆಯಾಗಿದೆ. ಶೈಜುರವರು ಕಠಿಣ ಪರಿಶ್ರಮದಿಂದ ದುಡಿದು ಈಗ ದೊಡ್ಡ ಮಟ್ಟದ ಉದ್ಯಮಿಯಾಗಿದ್ದಾರೆ. ಅವರ ಪತ್ನಿ, ಮಕ್ಕಳು ಅವರಿಗೆ ಬೆಂಬಲ ನೀಡಿದ್ದಾರೆ.ಅವರಿಗೆ ಯಶಸ್ಸು ಸಿಗಲಿ ಎಂದರು.

ಶಿಲ್ಪ ಆರ್ಕೆಡ್‌ನ ಮಾಲಕ ಶಿವಣ್ಣ.ಪಿ.ಹೆಗ್ಡೆಯವರು ಸ್ವಾಗತಿಸಿ ಮಾತನಾಡಿದ ಅವರು ಶೈಜು ಹಾಗೂ ನನ್ನ ನಡುವೆ 30 ವರ್ಷಗಳ ಒಡನಾಟವಿದೆ. ಅವರು 30 ವರ್ಷದ ಹಿಂದೆ ಸಾಮಾನ್ಯ ಮೇಸ್ತ್ರಿಯಾಗಿ ನಾಲ್ಕೈದು ಕೆಲಸಗಾರರೊಂದಿಗೆ ಇಲ್ಲಿಗೆ ಬಂದವರಾಗಿದ್ದಾರೆ. ಕಠಿಣ ಪರಿಶ್ರಮ, ಪ್ರಾಮಾಣಿಕತೆಯಿಂದ ಈ ಹಂತಕ್ಕೆ ಬೆಳೆದಿದ್ದಾರೆ. ಶೈಜುರವರು ಆರಂಭಿಸಿರುವ ಅವರ ಉದ್ಯಮಕ್ಕೆ ಯಶಸ್ಸು ಸಿಗಲಿ ಎಂದು ಹೇಳಿದರು.ಮಾಲಕ ಶೈಜು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಲಕ ಶೈಜುರವರ ಪತ್ನಿ ಜೆನಿತೋಮಸ್‌ರವರು ವಂದಿಸಿದರು. ಪುತ್ರಿಯರಾದ ಅಲೀನಾತೋಮಸ್, ಅಶ್ನಾತೋಮಸ್ ಪ್ರಾರ್ಥಿಸಿದರು. ಶೀನಪ್ಪ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮೇನೇಜರ್ ಶಾಜಿಜೋಸ್ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಉದ್ಯಮಿ ಕೆ.ಪಿ.ತೋಮಸ್ ನೆಲ್ಯಾಡಿ, ನಿವೃತ್ತ ಸೈನಿಕ ಒ.ಜಿ.ನೈನಾನ್, ನಿವೃತ್ತ ಮುಖ್ಯಶಿಕ್ಷಕ ಚಾಕೋ ವರ್ಗೀಸ್, ನೆಲ್ಯಾಡಿ ವರ್ತಕ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಎಪಿಎಂಸಿ ನಿರ್ದೇಶಕ ಕುಶಾಲಪ್ಪ ಗೌಡ ಅನಿಲ ಸೇರಿದಂತೆ ನೆಲ್ಯಾಡಿಯ ವರ್ತಕರು, ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು

Leave a Reply

error: Content is protected !!