ಸುಳ್ಯ: ವಿಶ್ವಕರ್ಮ ಕಮ್ಮಾರ ಗುಡಿ ಕೈಗಾರಿಕಾ ಸಂಘದ ಜಿಲ್ಲಾ ಸಮಿತಿ ರಚನಾ ಸಭೆ ಮತ್ತು ಉದ್ಘಾಟನಾ ಕಾರ್ಯಕ್ರಮವು ಶ್ರೀ ರಾಮ ಭಜನಾ ಮಂದಿರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವು ಮೋಹನ ಆಚಾರ್ಯ ಕೆದಿಕ್ಕಾನ ಇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ ಸಂಘದ ನೂತನ ಸಮಿತಿಯನ್ನು ವಕೀಲರು ಹರೀಶ್ ಬೂಡುಪನ್ನೆ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಅಧ್ಯಕ್ಷ ಸತೀಶ್ ಆಚಾರ್ಯ ಚೊಕ್ಕಾಡಿ, ತಾಲೂಕು ಅಧ್ಯಕ್ಷ ವಾಸುದೇವ ಆಚಾರ್ಯ ಮರ್ಕಂಜ, ಕಾನೂನು ಸಲಹೆಗಾರರಾದ ಹರೀಶ್ ಬೂಡುಪನ್ನೆ, ಸಂಘದ ತಾಲೂಕು ಕಾರ್ಯದರ್ಶಿ ಜನಾರ್ದನ ಆಚಾರ್ಯ ಪಂಜ, ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ಸುಳ್ಯ ತಾಲೂಕು ಅಧ್ಯಕ್ಷ ಸತ್ಯ ಶಾಂತಿ ತ್ಯಾಗ ಮೂರ್ತಿ ಕುಕ್ಕಂದೂರು, ಉಪಸ್ಥಿತರಿದ್ದರು.
ಕಾನೂನು ಸಲಹೆ ನೀಡಿದ ಹರೀಶ್ ಬೂಡುಪನ್ನೆಯವರು ಸಂಘದ ಸದಸ್ಯರುಗಳ ಕೆಲವು ಪ್ರಶ್ನೆಗಳಿಗೆ ಕಾನೂನು ರೀತ್ಯಾ ತಿಳುವಳಿಕೆ ಮಾಹಿತಿಯನ್ನು ನೀಡಿದರು. ಜಿಲ್ಲಾ ಸಮಿತಿಯಲ್ಲಿ ಅಧ್ಯಕ್ಷರಾಗಿ ಸತೀಶ್ ಆಚಾರ್ಯ ಚೊಕ್ಕಾಡಿ, ಉಪಾಧ್ಯಕ್ಷರುಗಳಾಗಿ ರಮೇಶ್ ಆಚಾರ್ಯ ಕಡೆ ಶಿವಾಲಯ, ಕೇಶವ ಆಚಾರ್ಯ ಕಾವಲು ಕಟ್ಟೆ, ಸಂಚಾಲಕರಾಗಿ ರಜನೀಶ್ ಆಚಾರ್ಯ ಬರಿಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಆಚಾರ್ಯ ತೊಡಿಕಾನ, ಜೊತೆ ಕಾರ್ಯದರ್ಶಿಯಾಗಿ ಜನಾರ್ದನ ಆಚಾರ್ಯ ಪಂಜ, ಕೋಶಾಧಿಕಾರಿಯಾಗಿ ರೋಹಿತ್ ಆಚಾರ್ಯ ಚೀಮುಲ್ಲು, ಸಂಘಟನಾ ಕಾರ್ಯದರ್ಶಿಯಾಗಿ ಭವಾನಿಶಂಕರ ಆಚಾರ್ಯ ಅಡ್ಡನಪಾರೆ, ಸದಸ್ಯರುಗಳಾಗಿ ರವಿ ಆಚಾರ್ಯ ಸಿದ್ಧಕಟ್ಟೆ, ಸುಂದರ ಆಚಾರ್ಯ ಬೆಳ್ತಂಗಡಿ, ಪ್ರಸನ್ನ ಆಚಾರ್ಯ ಪುತ್ತೂರು, ಜಗನ್ನಾಥ ಆಚಾರ್ಯ ಪುತ್ತೂರು, ಜಗದೀಶ ಆಚಾರ್ಯ ಕಡಬ, ಹರೀಶ್ ಆಚಾರ್ಯ ಮೂಡುಬಿದಿರೆ, ಸೀತಾರಾಮ ಆಚಾರ್ಯ ಮುಡಿಪು,ಉದಯ ಆಚಾರ್ಯ ಅರೆಕಲ್ಲು, ಆಯ್ಕೆಯಾದರು.
ಕಾರ್ಯಕ್ರಮದ ರೂಪುರೇಷೆಯನ್ನು ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆ ಸುಳ್ಯ ತಾಲೂಕು ಅಧ್ಯಕ್ಷ ಸತ್ಯ ಶಾಂತಿ ತ್ಯಾಗ ಮೂರ್ತಿ ಕುಕ್ಕಂದೂರು ನೆರವೇರಿಸಿದರು. ಲೋಲಾಕ್ಷ ಆಚಾರ್ಯ ಗೂನಡ್ಕ ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ ತೊಡಿಕಾನ ವಂದಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಡಿಕೇರಿ ತಾಲೂಕಿನ ವಿಶ್ವಕರ್ಮ ಸಮಾಜದ ಕಮ್ಮಾರ ಕೆಲಸ ಮಾಡುತ್ತಿರುವ ಸದಸ್ಯರುಗಳು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿ ಮಾಹಿತಿಯನ್ನು ಪಡೆದುಕೊಂಡರು.