ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಿಂದ ಸ್ನೇಹಾಲಯ, ಹಾಗೂ ಎಂ ಓ ಯು ಸಂಸ್ಥೆಯಾದ ಇಂಚರ ಮಕ್ಕಳ ಮನೆಗೆ ಅಧ್ಯಯನ ಬೇಟಿಯನ್ನು ಕೈಗೊಳ್ಳಲಾಯಿತು.
ವಿದ್ಯಾರ್ಥಿಗಳು ಅಲ್ಲಿರುವ ಮಕ್ಕಳಿಗೆ ವಿವಿಧ ರೀತಿಯ ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.
ಅದೇ ರೀತಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಹಣಕಾಸಿನ ನೆರವು, ವಿದ್ಯಾರ್ಥಿಗಳು ತಂದ ಹಾಗೂ ಅಕ್ಕಿ ತೆಂಗಿನಕಾಯಿಗಳನ್ನು ಸಂಸ್ಥೆಗೆ ನೀಡಲಾಯಿತು. ಅದೇ ದಿನ ಮಂಗಳೂರಿನ ಪಿಲಿಕುಳದಲ್ಲಿರುವ ಪಾರಂಪರಿಕ ಹಳ್ಳಿ ಹಾಗೂ ಗುತ್ತಿನ ಮನೆಗೆ ವಿದ್ಯಾರ್ಥಿಗಳು ಭೇಟಿ ನೀಡಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮನೋಹರ ಹಾಗೂ ಉಪನ್ಯಾಸಕಿ ಶ್ರೀಮತಿ ಆರತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು.