ಸುಬ್ರಹ್ಮಣ್ಯ: ಮುಜರಾಯಿ ಇಲಾಖೆ ಅಡಿ ಬರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ವಾರ್ಷಿಕ ಆದಾಯ ರೂಪದಲ್ಲಿ 123 ಕೋಟಿ ರೂಪಾಯಿಯನ್ನು ಗಳಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆರ್ಥಿಕ ವರ್ಷ ಮುಗಿದಿದೆ.
2022ರ ಏಪ್ರಿಲ್‌ನಿಂದ 2023 ಮಾರ್ಚ್ 31ರ ತನಕ ಆರ್ಥಿಕ ವರ್ಷವೆಂದು ಪರಿಗಣಿಸಿದ್ದು, 123,64,49,480,47 ರೂ. ಆದಾಯ ಗಳಿಸಿದೆ.
ಈ ಮೂಲಕ ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನಿಯಾಗುವ ನಿರೀಕ್ಷೆಯನ್ನು ಆಡಳಿತ ಮಂಡಳಿ ಹೊಂದಿದೆ. ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಬಂದಿರುವ ಆದಾಯ ಇದಾಗಿದೆ. ಸತತ ರಾಜ್ಯದ ನಂಬರ್ ಒನ್ ಆದಾಯ ಗಳಿಕೆಯ ದೇವಸ್ಥಾನವಾಗಿ ಕುಕ್ಕೆ ಸುಬ್ರಹ್ಮಣ್ಯ ಗುರುತಿಸಿಕೊಂಡಿದೆ.