ಎ.19, 20ರಂದು ನೆಲ್ಯಾಡಿ ಲಹರಿ ಸಂಗೀತ ಕಲಾ ಕೇಂದ್ರ ಐಐಸಿಟಿ ದಿಂದ ಉಚಿತ ಸುಗಮ ಸಂಗೀತ, ಕೀಬೋರ್ಡ್ ತರಬೇತಿ ಕಾರ್ಯಾಗಾರ

ಶೇರ್ ಮಾಡಿ

ನೆಲ್ಯಾಡಿ: ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇಲ್ಲಿ ಕಳೆದ ಒಂದೂವರೆ ವರುಷದಿಂದ ಸುಗಮ ಸಂಗೀತ ಮತ್ತು ಕೀಬೋರ್ಡ್ ತರಬೇತಿ ತರಗತಿಯು ಕಾರ್ಯಾಚರಿಸುತ್ತಿದ್ದು ಇದರ ವತಿಯಿಂದ ಎ.19 ಮತ್ತು 20ರಂದು ಬೆಳಿಗ್ಗೆ 10 ರಿಂದ ನೆಲ್ಯಾಡಿ ಸಂತಜಾರ್ಜ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಉಚಿತವಾಗಿ 2 ದಿನಗಳ ಕಾಲ ಸುಗಮ ಸಂಗೀತ ಮತ್ತು ಕೀಬೋರ್ಡ್ ತರಬೇತಿ ಕಾರ್ಯಾಗಾರ ನಡೆಯಲಿದೆ.

ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ವೈದ್ಯ, ಶಾಸ್ತ್ರೀಯ ಸಂಗೀತಗಾರರು, ಕೊಳಲು, ಪಿಟೀಲು ವಾದಕರೂ ಆದ ಡಾ.ರಾಮಕೃಷ್ಣ ಭಟ್, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ, ಕೀಬೋರ್ಡ್ ಮತ್ತು ಗಿಟಾರ್ ವಾದಕ ಬಾಬಣ್ಣ ಪುತ್ತೂರು, ಖ್ಯಾತ ಹಿನ್ನೆಲೆ ಸಂಗೀತ ನಿರ್ದೇಶಕ, ಮಂಗಳೂರಿನ ಚಾ ಪರ್‍ಕ ತಂಡದ ಗುರು ಬಾಯಾರು, ಖ್ಯಾತ ತಬಲಾ ವಾದಕ, ನಾಟಕ ಸಂಗೀತ ನಿರ್ದೇಶಕ ದಯಾನಂದ ಆಚಾರ್ಯ ವಾಣಿಶ್ರೀ ನೆಲ್ಯಾಡಿಯವರು ಭಾಗವಹಿಸಲಿದ್ದಾರೆ.
ಸಂಗೀತಾಸಕ್ತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ ಎಂದು ಲಹರಿ ಸಂಗೀತ ಕಲಾ ಕೇಂದ್ರದ ಸಂಗೀತ ಗುರು ವಿಶ್ವನಾಥ ಶೆಟ್ಟಿ ಕೆ., ನಿರ್ದೇಶಕ ಪ್ರಶಾಂತ್ ಸಿ.ಹೆಚ್. ಹಾಗೂ ವ್ಯವಸ್ಥಾಪಕಿ ಶ್ರೀಮತಿ ಅನಿತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!