2024ರ ಫೆಬ್ರವರಿಯಲ್ಲಿ ವೇಣೂರು ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಶೇರ್ ಮಾಡಿ

ಬೆಳ್ತಂಗಡಿ: 2024ರ ಫೆಬ್ರವರಿಯಲ್ಲಿ ವೇಣೂರಿನಲ್ಲಿರುವ ಭಗವಾನ್‌ ಶ್ರೀ ಬಾಹು ಬಲಿ ಸ್ವಾಮಿಯ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಡಾ| ಡಿ.ವೀರೇಂದ್ರ ಹೆಗ್ಗಡೆ ಪ್ರಕಟಿಸಿದರು.

ಉಜಿರೆಯ ಸಿದ್ಧವನ ಗುರುಕುಲದಲ್ಲಿ ಬುಧವಾರ ನಡೆದ ಮಹಾಮಸ್ತಕಾಭಿಷೇಕದ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಮಾಹಿತಿ ಪ್ರಕಟಿಸಿದರು.

ಧರ್ಮ ಕೇವಲ ಆರಾಧನೆಗಾಗಿ ಅಲ್ಲ. ಧರ್ಮವನ್ನು ನಾವು ಧರಿಸಿ ಅದರ ಮರ್ಮವನ್ನರಿತು ನಿತ್ಯವೂ ಅನುಷ್ಠಾನ ಮಾಡಬೇಕು. ಅಹಿಂಸೆ ಹಾಗೂ ಬದುಕು ಮತ್ತು ಬದುಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಠ ತಣ್ತೀವಾಗಿದೆ. ಯುವಜನತೆಯಲ್ಲಿ ಈ ಬಗ್ಗೆ ಅರಿವು, ಜಾಗೃತಿ ಮೂಡಿ ಸುವುದೇ ಮಸ್ತಕಾಭಿಷೇಕದ ಧ್ಯೇಯವಾಗಿದೆ ಎಂದು ಹೆಗ್ಗಡೆ ಹೇಳಿದರು.

ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಅಹಿಂಸೆಯಿಂದ ಶಾಂತಿ, ತ್ಯಾಗದಿಂದ ಸುಖ ಮತ್ತು ಮಿತ್ರತ್ವದಿಂದ ಪ್ರಗತಿ ಎಂಬುದು ಜೈನ ಧರ್ಮದ ಸಿದ್ಧಾಂತ. ಮಸ್ತಕಾಭಿಷೇಕದ ಸಂದರ್ಭ ಅನೇಕ ಅಭಿವೃದ್ಧಿ ಕಾರ್ಯಗಳೂ ನಡೆದು ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸೌಹಾರ್ದ ಮೂಡಿಬರಲಿ ಎಂದು ಹಾರೈಸಿದರು.

ಭಾರತೀಯ ಜೈನ್‌ ಮಿಲನ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್‌, ಸಮಿತಿಯ ಕೋಶಾಧಿಕಾರಿ ಪಿ.ಜಯರಾಜ್‌ ಕಂಬಳಿ ಇದ್ದರು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ ಅಜಿಲರು ಸ್ವಾಗತಿಸಿದರು. ವೇಣೂರು ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಇಂದ್ರ ವಂದಿಸಿದರು. ಕಾರ್ಯದರ್ಶಿ ಮಹಾವೀರ ಜೈನ್‌ ಮೂಡುಕೋಡಿ ನಿರ್ವಹಿಸಿದರು.

Leave a Reply

error: Content is protected !!