ದ.ಕ.ಜಿಲ್ಲೆಯಲ್ಲಿ 7 ನಾಮಪತ್ರಗಳು ತಿರಸ್ಕೃತ, 102 ಕ್ರಮಬದ್ಧ : ಡಿಸಿ ರವಿಕುಮಾರ್

ಶೇರ್ ಮಾಡಿ

ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯುವ ಚುನಾವಣೆಗೆ ದ.ಕ.ಜಿಲ್ಲೆಯ 8 ಕ್ಷೇತ್ರಗಳಿಗೆ ಸಲ್ಲಿಸಿದ್ದ 109 ನಾಮಪತ್ರಗಳ ಪೈಕಿ 7 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಶುಕ್ರವಾರ ನಾಮಪತ್ರಗಳ ಪರಿಶೀಲನೆಯ ಸಂದರ್ಭ ಏಳು ನಾಮಪತ್ರಗಳು ತಿರಸ್ಕೃತಗೊಂಡಿದ್ದರೆ, 72 ಅಭ್ಯರ್ಥಿಗಳ 102 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ನಗರ ಉತ್ತರದಲ್ಲಿ ಒಂದು ಹಾಗೂ ಮಂಗಳೂರು ನಗರ ದಕ್ಷಿಣ, ಮಂಗಳೂರು ಹಾಗೂ ಬಂಟ್ವಾಳದಲ್ಲಿ ತಲಾ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.
ಜಿಲ್ಲೆಯಲ್ಲಿ ಒಟ್ಟು 97 ಪುರುಷ ಹಾಗೂ 12 ಮಹಿಳಾ ಅಭ್ಯರ್ಥಿಗಳು ಸೇರಿ 109 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಅದರಲ್ಲಿ 64 ಪುರುಷ ಹಾಗೂ 8 ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕಾರಗೊಂಡಿವೆ.
ಬೆಳ್ತಂಗಡಿಯಲ್ಲಿ 10, ಮೂಡುಬಿದಿರೆಯಲ್ಲಿ 9, ಮಂಗಳೂರು ನಗರ ಉತ್ತರ 12, ಮಂಗಳೂರು ನಗರ ದಕ್ಷಿಣ 8, ಮಂಗಳೂರು 8, ಬಂಟ್ವಾಳ 6, ಪುತ್ತೂರು 10 ಹಾಗೂ ಸುಳ್ಯದ 9 ಅಭ್ಯರ್ಥಿಗಳ ನಾಮಪತ್ರಗಳು ಕ್ರಮ ಬದ್ಧವಾಗಿವೆ. ಎ. 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.

Leave a Reply

error: Content is protected !!