ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯದ ಪ್ರವೇಶ ಪತ್ರಗಳನ್ನು ದಿನಾಂಕ 01-05-2023 ರಿಂದ ಕೊಡಲಾಗುವುದು. ಶ್ರೀ ಸಿದ್ಧಲಿಂಗೇಶ್ವರ ಅನಾಥಾಲಯಕ್ಕೆ ಹೊಸದಾಗಿ 3 ರಿಂದ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಬಯಸುವ ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಖುದ್ದಾಗಿ ಬಂದು ಶ್ರೀ ಮಠದ ಲೆಕ್ಕಪತ್ರ ವಿಭಾಗದಲ್ಲಿ ಪ್ರವೇಶ ಪತ್ರವನ್ನು ಪಡೆಯಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೂ ಆದ್ಯತೆ ನೀಡಲಾಗಿದೆ. ಈ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಪೋಷಕರು ಸಹ ಮಠಕ್ಕೆ ಭೇಟಿ ನೀಡಿ ಪ್ರವೇಶ ಅರ್ಜಿಗಳನ್ನು ಪಡೆಯಬಹುದಾಗಿದೆ.
ಪ್ರವೇಶ ಅರ್ಜಿಗಳನ್ನು ಪಡೆದ ನಂತರ ವಿದ್ಯಾರ್ಥಿಗಳು ಸರಿಯಾಗಿ ಭರ್ತಿ ಮಾಡಿದ ಪ್ರವೇಶ ಪತ್ರವನ್ನು ಆಯಾ ತಾಲೂಕಿನ ತಹಶೀಲ್ದಾರ್ ಅವರಿಂದ ನಿಗಧಿತ ನಮೂನೆಯಲ್ಲಿ ಧೃಡೀಕರಿಸಲ್ಪಟ್ಟ ವಾರ್ಷಿಕ ವರಮಾನದ ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಇದರೊಂದಿಗೆ ಉಳಿದ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ದಿನಾಂಕ 25-05-2023ರ ಒಳಗಾಗಿ ಅನಾಥಾಲಯದ ಕಛೇರಿಯನ್ನು ತಲುಪುವಂತೆ ಕಳುಹಿಸಬೇಕು. ಸರಿಯಾಗಿ ಭರ್ತಿ ಮಾಡದಿರುವ ಮತ್ತು ದಾಖಲೆಗಳನ್ನು ಲಗತ್ತಿಸದೆ ಇರುವ ಪ್ರವೇಶ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ.
ಪ್ರವೇಶವನ್ನು ಆಪೇಕ್ಷಿಸುವ ವಿದ್ಯಾರ್ಥಿಗಳು, ದಿನಾಂಕ 29-05-2023 ರಿಂದ ಪ್ರಾರಂಭವಾಗುವ ಸಂದರ್ಶನದ ವೇಳೆಯಲ್ಲಿ ಖುದ್ದಾಗಿ ಬಂದು ಅಧ್ಯಕ್ಷರ ಸಂದರ್ಶನ ಪಡೆಯಬೇಕು. ಪ್ರತ್ಯೇಕವಾಗಿ ಸಂದರ್ಶನದ ಪತ್ರಗಳನ್ನು ಕಳುಹಿಸಿ ಕೊಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.