ನೆಲ್ಯಾಡಿ: ಬೆಥನಿ ಅಸೆಂಬ್ಲಿ ಆಫ್ ಗಾಡ್ ಚರ್ಚ್ ನ ನವೀಕರಿಸಿದ ಕಟ್ಟಡದ ಉದ್ಘಾಟನೆಯು ಎ.20 ರಂದು ನೆರವೇರಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನರಲ್ ಪ್ರಸ್ಬಿಟರ್ ರೆವ.ಜಸ್ಟಿನ್ ಜೋನ್ ಅವರು ವಹಿಸಿದ್ದರು. ಅಸೆಂಬ್ಲಿ ಅಫ್ ಗಾಡ್ ನ ಆಲ್ ಇಂಡಿಯಾ ಸೂಪರಿಂಟೆಂಡೆಂಟ್ ಆಗಿರುವ ರೆವ. ಪೋಲ್ ತಂಗಯ್ಯ ಅವರು ಕಟ್ಟಡವನ್ನು ಉದ್ಘಾಟಿಸಿ ಆಶೀರ್ವದಿಸಿ, ದಿನದ ಸಂದೇಶವನ್ನು ಜನರಿಗೆ ನೀಡಿದರು.
ಸೌತ್ ಕೆನರಾ ಸೆಕ್ಷನ್ ಇದರ ಪ್ರಸ್ಪಿಟರ್ ಆಗಿರುವ ರೆವ.ಟಿ.ಐ.ಜೋಯ್ ಸ್ವಾಗತಿಸಿದರು. ಸಭಾಪಾಲಕರಾಗಿರುವಂತಹ ರೆವ.ತೋಮಸ್ ಪಿ.ಎಂ. ಧನ್ಯವಾದ ನೆರವೇರಿಸಿದರು.