





ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಬೈಲ್ ನಿವಾಸಿ ವಸಂತ್ ಎಂಬವರು ನಾಪತ್ತೆ ಆದ ಘಟನೆ ನಡೆದಿದ್ದು, ಅವರು ಸೋಮೇಶ್ವರ ಬಳಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬುಧವಾರ ಮುಂಜಾನೆ ಕಾರ್ ನಲ್ಲಿ ಸೋಮೇಶ್ವರ ಕಡೆ ವಸಂತ್ ತೆರಳಿದ್ದರು. ಮುಂಜಾನೆಯಿಂದ ಕಾರ್ ಸೋಮೇಶ್ವರ ಬಳಿ ಇರುವುದನ್ನು ಕಂಡು ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರ್, ಮೊಬೈಲ್, ಶೂ ಮತ್ತು ಆತನ ಆಧಾರ್ ಕಾರ್ಡ್ ಪತ್ತೆಯಾಗಿದೆ. ಕಾರ್ ನಲ್ಲಿ ಹೋಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಪತ್ತೆಗಾಗಿ ಶೋಧ ಮುಂದುವರಿದಿದೆ.