ಕೊಟ್ಟ ಮಾತಿಗೆ ತಪ್ಪಲಾರೆ, ಸುಳ್ಳು ಭರವಸೆಯನ್ನು ಕೊಡುವುದಿಲ್ಲ : ಅಶೋಕ್ ಕುಮಾರ್ ರೈ

ಶೇರ್ ಮಾಡಿ

ಪುತ್ತೂರು: ಮಾತು ಕೊಟ್ಟಿದ್ದರೆ ಅದಕ್ಕೆ ತಪ್ಪಿ ನಡೆಯಲಾರೆ ಮತ್ತು ಚುನಾವಣೆಗೆ ಸ್ಪರ್ದಿಸುತ್ತಿದ್ದೇನೆ, ವೋಟು ಸಿಗಬೇಕು ಎಂದು ಜನತೆಗೆ ಸುಳ್ಳು ಭರವಸೆಯನ್ನು ಕೊಡುವುದಿಲ್ಲ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈಯವರು ಹೇಳಿದರು.

ಮಾಣಿಲ ಗ್ರಾಮದ ವಿವಿಧ ದಲಿತ ಕಾಲೊನಿಗಳಿಗೆ ಭೇಟಿ ನೀಡಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲನಿಯ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಅಶೋಕ್ ರೈ ಬಳಿ ಹೇಳಿಕೊಂಡರು. ಕಳೆದ ಹಲವು ವರ್ಷಗಳಿಂದ ನಾವು ಮನೆ ಮಾಡಿಕೊಂಡಿದ್ದು ನಮ್ಮ ಮನೆಯ ಅಡಿಸ್ಥಳಕ್ಕೆ ಇನ್ನೂ ಹಕ್ಕು ಪತ್ರ ಕೊಟ್ಟಿಲ್ಲ. 94 ಸಿ ಯಡಿ ಅರ್ಜಿ ಹಾಕಿದರು ಯಾವುದೇ ಪ್ರಯೋಜನವಿಲ್ಲ. ಕೆಲವರು ಹಲವು ಬಾರಿ ಕಚೇರಿಗೆ ಅಲೆದಾಡಿದ್ದೇವೆ, ಶಾಸಕರ ಬಳಿಗೂ ತೆರಳಿ ವಿವರ ನೀಡಿದ್ದೇವೆ ಆದರೂ ಏನೂ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ, ಕೆಲವು ಮನೆಗಳು ನಾದುರಸ್ಥಿಯಲ್ಲಿದ್ದು ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಪ್ರತೀ ಬಾರಿಯೂ ಚುನಾವಣೆ ಬಂದಾಗ ಒಂದಷ್ಟು ಮಂದಿ ಮನೆ ಕಡೆ ಬರುತ್ತರೆ, ಆಶ್ವಾಸನೆ ಕೊಡುತ್ತಾರೆ ಮತ್ತೆ ಬರುವುದೇ ಇಲ್ಲ ಎಂದು ತಮ್ಮ ನೋವನ್ನು ಹೇಳಿಕೊಂಡರು.
ಬಳಿಕ ಮಾತನಾಡಿದ ಅಭ್ಯರ್ಥಿ ಅಶೋಕ್ ರೈಯವರು ನಿಮ್ಮ ಸಂಕಷ್ಟ ನನಗೆ ಅರಿವಾಗಿದೆ. ನಿಮ್ಮ ಮನೆಯ ಅಡಿಸ್ಥಳಕ್ಕೆ ಹಕ್ಕುಪತ್ರ ಸಿಕ್ಕಿಲ್ಲ ಮತ್ತು 94 ಸಿ ಅರ್ಜಿಯನ್ನು ವಿಲೇವಾರಿ ಮಾಡದೇ ಇರುವುದು ಡೊಡ್ಡ ತಪ್ಪು. ನೀವು ಕಾಂಗ್ರೆಸ್ ಗೆ ವೋಟು ಹಾಕಿ ನಾನು ಗೆದ್ದುಬಂದಲ್ಲಿ ನಿಮ್ಮ ಮನೆಯ ಅಡಿಸ್ಥಳಕ್ಕೆ ಖಂಡಿತವಾಗಿಯೂ ಹಕ್ಕುಪತ್ರವನ್ನು ನೀಡುತ್ತೇನೆ ಎಂದರು

See also  ನೆಲ್ಯಾಡಿ: ಹೊಸಮಜಲು-ಕೌಕ್ರಾಡಿ ಅಶ್ವತ್ಥ ಗೆಳೆಯರ ಬಳಗ(ರಿ) ವತಿಯಿಂದ ಭಗತ್ ಸಿಂಗ್ ಜನ್ಮ ದಿನದ ಆಚರಣೆ

Leave a Reply

Your email address will not be published. Required fields are marked *

error: Content is protected !!