ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕನಸು “ಮದ್ಯ ಮುಕ್ತ ಮತದಾನ” – ಕರಪತ್ರ ಹಂಚಿಕೆ

ಶೇರ್ ಮಾಡಿ

ಕಡಬ: ಕಡಬ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಸಾರ್ವಜನಿಕರಲ್ಲಿ ಮದ್ಯ ಮುಕ್ತ ಹಾಗೂ ಮದ್ಯ ಆಮಿಷಗಳ ಬಗ್ಗೆ ಜನಜಾಗೃತಿ ಮೂಡಿಸುವ ಕುರಿತು ದೊಡ್ಡಕೊಪ್ಪ ಒಕ್ಕೂಟದ ಭಾಗದ ಸದಸ್ಯರಿಗೆ ತಿಳುವಳಿಕೆ ನೀಡಿ ಕರಪತ್ರವನ್ನು ಹಂಚಲಾಯಿತು.

ವಿಧಾನಸಭಾ ಚುನಾವಣೆಯು ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದು, ಮತದಾರರು ಮದ್ಯಪಾನದ ಆಸೆಗೆ ಬಿದ್ದು ಅಥವಾ ಇನ್ನಿತರ ಆಮಿಷಗಳಿಗೆ ಬಿದ್ದು ಮತದಾನ ಮಾಡುವುದಾಗಲಿ, ಮದ್ಯಪಾನದ ಆಸೆಯನ್ನು ತೋರಿಸಿ ಇನ್ನೊಬ್ಬರಿಂದ ಮತ ಕೇಳುವುದು ಇವೆರಡು ಸಮಾಜದ ಘಾತುಕ ಚಟುವಟಿಗಳಾಗಿವೆ. ಈ ರೀತಿಯ ಸನ್ನಿವೇಶಗಳು ಸ್ಥಳೀಯವಾಗಿ ಕಂಡುಬಂದಲ್ಲಿ ನಿಮ್ಮ ಹತ್ತಿರದ ಮುಖ್ಯ ಚುನಾವಣಾ ಅಧಿಕಾರಿಗಳಿಗೆ, ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವಂತೆ ತಿಳುವಳಿಕೆ ನೀಡಲಾಯಿತು, ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹಾಗೂ ಜನಜಾಗೃತಿ ವೇದಿಕೆಯ ಕನಸು ಮದ್ಯ ಮುಕ್ತವಾದ ಮತದಾನ ನಡೆಯುವುದು ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾದಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಾಗಿದೆ, ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬ ನಾಗರೀಕನು ಕಡ್ಡಾಯವಾಗಿ ಮತದಾನ ಮಾಡಬೇಕು, ನಮ್ಮ ಜವಾಬ್ದಾರಿ ಎಂದು ವಲಯ ಮೇಲ್ವಿಚಾರಕ ರವಿ ಪ್ರಸಾದ್ ಆಲಾಚೆ ಮಾಹಿತಿ ನೀಡಿದರು.

ಜನಜಾಗೃತಿ ವೇದಿಕೆಯಿಂದ ಬಿಡುಗಡೆಗೊಂಡಿರುವ ಕರಪತ್ರವನ್ನು ಹಂಚಿದರು.
ಸಂದರ್ಭದಲ್ಲಿ ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಚೇತನ, ಸೇವಾ ಪ್ರತಿನಿಧಿ ಸವಿತಾ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

error: Content is protected !!