ಇಬ್ಬರು ಮಕ್ಕಳು ಕಣ್ಕಲ್ ಬಳಿ ನೀರಿನಲ್ಲಿ ಮುಳುಗಿ ದಾರುಣ ಸಾವು

ಶೇರ್ ಮಾಡಿ

ಕೇನ್ಯ : ಕೇನ್ಯ ಗ್ರಾಮದ ಕಣ್ಕಲ್ ಬಳಿಯ ಪಳ್ಳ ಎಂಬಲ್ಲಿ ಕುಮಾರಧಾರ ಹೊಳೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಮೇ.8 ರಂದು ಸಂಜೆ 4 ಗಂಟೆಗೆ ನಡೆದಿತ್ತು.

ಮೃತರನ್ನು ಸತೀಶ್ ಅಮ್ಮಣ್ಣಾಯ ಎಂಬವರ ಮಕ್ಕಳಾದ ಹಂಷಿತ (14 ವರ್ಷ) ಮತ್ತು ಅವಂತಿಕಾ (10 ವರ್ಷ) ಎಂದು ಗುರುತಿಸಲಾಗಿದೆ

ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆ, ಸ್ಥಳೀಯರ ಸಹಕಾರದಿಂದ ಇಬ್ಬರ ಮೃತ ದೇಹ ಪತ್ತೆ ಹಚ್ಚಲಾಗಿದೆ .
ಬೆಂಗಳೂರಿನಲ್ಲಿ ನೆಲೆಸಿರುವ ಸತೀಶ್ ಅಮ್ಮಣ್ಣಾಯ ಅವರು ತನ್ನ ಅಣ್ಣನ ಮನೆಗೆ ಬಂದಿದ್ದ ವೇಳೆ ಮಕ್ಕಳು ಸ್ನಾನಕ್ಕೆಂದು ನದಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!