ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಕಡಬ ಪೇಟೆಯಲ್ಲಿ ಬಹಿರಂಗ ಚುನಾವಣಾ ಪ್ರಚಾರ

ಶೇರ್ ಮಾಡಿ

ಕಡಬ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯರು ಕಡಬ ಪೇಟೆಯಲ್ಲಿ ಬೃಹತ್ ರೋಡ್ ಶೋ ಮೂಲಕ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಮತಯಾಚಿಸಿದರು.

ಕಡಬದ ಮಂಡೆಕರ ಕಾಂಪ್ಲೆಕ್ಸ್ ನಿಂದ ಬೃಹತ್ ಕೇಸರಿಪಡೆಯ ಕಾರ್ಯಕರ್ತರೊಂದಿಗೆ ಆರಂಭವಾದ ರೋಡ್ ಶೊ ಮುಖ್ಯ ಪೇಟೆಯಲ್ಲಿ ಸಾಗಿ ಬಂದು ಕಡಬ ಪೇಟೆಯ ಸರಕಾರಿ ಬಸ್ಸು ತಂಗುದಾಣದಲ್ಲಿ ಸಂಪನ್ನಗೊಂಡಿತ್ತು.

ಅಭ್ಯರ್ಥಿ ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಮುಖರಾದ ರಾಮದಾಸ್ ಬಂಟ್ವಾಳ, ಬೂಡಿಯಾರ್ ರಾಧಾಕೃಷ್ಣ ರೈ, ಮಂಡಲ ಪ್ರಮುಖರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ರಾಕೇಶ್ ರೈ ಕೆಡೆಂಜಿ, ವಿನಯ್ ಕುಮಾರ್ ಮುಳುಗಾಡು, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಕೃಷ್ಣ ಶೆಟ್ಟಿ ಕಡಬ, ಪಕ್ಷದ ಪ್ರಮುಖರು, ಹಿರಿಯರು, ಮಹಿಳಾ ಪ್ರಮುಖರು, ಮಹಾ ಶಕ್ತಿಕೇಂದ್ರ ಪ್ರಮುಖರು, ಗ್ರಾಮಪಂಚಾಯತ್ ಸದಸ್ಯರು, ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.

Leave a Reply

error: Content is protected !!