ಉಜಿರೆಯಲ್ಲಿ ಅನಾಥ ಶವವನ್ನು ಪೊಲೀಸರಿಗೆ ಒಪ್ಪಿಸಿದ ಸ್ವಯಂಸೇವಕರು; ಬ್ಯಾಗ್ ನಲ್ಲಿ 6.65 ಲಕ್ಷ ರೂಪಾಯಿ ಹಣ ಪತ್ತೆ

ಶೇರ್ ಮಾಡಿ

ಉಜಿರೆ: ಕುಶಾಲನಗರ ಮೂಲದ ವ್ಯಕ್ತಿಯೋರ್ವ ಉಜಿರೆಯಲ್ಲಿ ಬಹಳ ದಿನಗಳಿಂದ ವಾಸವಿದ್ದು. ಹಗಲಿನ ಹೊತ್ತಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ರಾತ್ರಿ ಹೊತ್ತಿನಲ್ಲಿ ಬಸ್ ತಂಗುದಾಣ, ಅಂಗಡಿಗಳು ಮುಚ್ಚಿದಾಗ ಅಂಗಡಿಯ ಮುಂಭಾಗದಲ್ಲಿ, ಬಿ.ಎಸ್.ಎನ್.ಎಲ್ ಕಚೇರಿಯ ಪಕ್ಕದಲ್ಲಿ ಮಲಗುತ್ತಾ ದಿನ ಕಳೆಯುತ್ತಿದ್ದರು.

ಈತ ನಿನ್ನೆ ಶವವಾಗಿ ಉಜಿರೆಯ ಟೆಲಿಫೋನ್ ಎಕ್ಸ್ ಚೇಂಜ್ ಸಮೀಪ ಪತ್ತೆಯಾಗಿತ್ತು.
55 ವರ್ಷದ ವ್ಯಕ್ತಿಯಾಗಿದ್ದು ಕುಶಾಲನಗರ ಮೂಲದ ತಮ್ಮಯ್ಯ ಎನ್ನುವುದು ಸ್ಥಳೀಯರಿಂದ ತಿಳಿದು ಬಂದಿದ್ದು ವ್ಯಕ್ತಿಯ ವಾರಸುದಾರರ ಬಗ್ಗೆ ಸರಿಯಾದ ಮಾಹಿತಿ ದೊರಕಿರುವುದಿಲ್ಲ.

ಕುಟುಂಬಸ್ಥರ ಪತ್ತೆಗಾಗಿ ಆತನ ಬ್ಯಾಗ್ ಹುಡುಕಿದಾಗ ಸುಮಾರು 6.65 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ.
ಉಜಿರೆ ಬೆಳಾಲು ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ರವೀಂದ್ರ, ಸುಧೀರ್ ಹಾಗೂ ರಾಘವೇಂದ್ರ ಇವರು ವಿಷಯ ತಿಳಿದು ಪೊಲೀಸ್ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು. ವಿಪತ್ತು ನಿರ್ವಹಣಾ ಯೋಜನಾಧಿಕಾರಿ ಜೈವಂತ ಪಟಗಾರ್ ಉಪಸ್ಥಿತರಿದ್ದರು.

Leave a Reply

error: Content is protected !!