




ಕಳೆಂಜ: ಇಲ್ಲಿಯ ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನ ಬಳಿ ಇರುವ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ.

ಇಂದು ಬೆಳಿಗ್ಗೆ ಈ ಟ್ಯಾಂಕ್‌ನಿಂದ ಸ್ಥಳೀಯ ಪರಿಸರದಲ್ಲಿ ನೀರು ಪೂರೈಕೆ ಮಾಡಲಾಗಿದ್ದು, ನೀರು ದುರ್ವಾಸನೆ ಬರುತ್ತಿರುವುದನ್ನು ಜನರು ಪಂಚಾಯತು ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳೀಯರು ಹೋಗಿ ಟ್ಯಾಂಕ್‌ನ ಒಳಗೆ ನೋಡಿದಾಗ ಅಪರಿಚಿತ ಗಂಡಸಿನ ಶವ ತೇಲಾಡುತ್ತಿರುವುದು ಪತ್ತೆಯಾಗಿದೆ. ಶವ ಕೊಳೆತು ಹೋಗಿದ್ದು, ಸುಮಾರು ನಾಲ್ಕು ದಿನಗಳ ಹಿಂದೆ ಈತ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.
ಈತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯಿಸಲಾಗಿದ್ದು, ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

