ಸಂಚಾರ ಪೊಲೀಸರಿಗೆ ತುರ್ತು ಸಂಚಾರ ನಿರ್ವಹಣೆಗೆ “ಕೋಬ್ರಾ’ ದ್ವಿಚಕ್ರ ಹಸ್ತಾಂತರ

ಶೇರ್ ಮಾಡಿ

ಮಂಗಳೂರು: ತುರ್ತು ಸಂಚಾರ ನಿರ್ವಹಣೆಗೆ ನೆರವಾಗುವ “ಕೋಬ್ರಾ’ 4 ದ್ವಿಚಕ್ರ ವಾಹನಗಳನ್ನು ಮಂಗಳೂರಿನ ಸಂಚಾರ ಪೂರ್ವ ಮತ್ತು ಪಶ್ಚಿಮ ಪೊಲೀಸ್‌ ಠಾಣೆಗಳಿಗೆ ಮಂಗಳವಾರ ಹಸ್ತಾಂತರಿಸಲಾಗಿದೆ.

ಅಪಘಾತ ಅಥವಾ ಇತರ ಸಂದರ್ಭಗಳಲ್ಲಿ ಸಂಚಾರ ಪೊಲೀಸರು ತುರ್ತಾಗಿ ಸ್ಥಳಕ್ಕೆ ತೆರಳಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಇದು ಸಹಕಾರಿಯಾಗಲಿದೆ.
ವಾಹನಗಳನ್ನು ಮಂಗಳೂರು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಹಸ್ತಾಂತರಿಸಿದರು. ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌, ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.

ವಿಶೇಷತೆ ಏನು ?
“ಕೋಬ್ರಾ’ ದ್ವಿಚಕ್ರ ವಾಹನಗಳಲ್ಲಿ ಸೈರನ್‌ ಮತ್ತು ಮೈಕ್‌ ವ್ಯವಸ್ಥೆ ಇರುತ್ತದೆ. ಪಾರ್ಕಿಂಗ್‌ ವ್ಯವಸ್ಥೆ ಸರಿಪಡಿಸಲು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲು, ಫುಟ್ ಪಾತ್ಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಇದರಿಂದ ಅನುಕೂಲವಾಗುತ್ತದೆ. ವಿಐಪಿಗಳು ಅಥವಾ ಆ್ಯಂಬುಲೆನ್ಸ್‌ಗಳ ಸಂಚಾರ ಸಂದರ್ಭ “ಗ್ರೀನ್‌ ಕಾರಿಡಾರ್‌’ಗೆ (ಮುಕ್ತ ಸಂಚಾರ) ಅವಕಾಶ ಮಾಡಿಕೊಡಲು ನೆರವಾಗುತ್ತದೆ. ಅಲ್ಲದೆ ಈ ದ್ವಿಚಕ್ರ ವಾಹನಗಳ ಮೂಲಕ ನಿರ್ದಿಷ್ಟ ಪ್ರದೇಶಗಳಲ್ಲಿ ನಿರಂತರವಾಗಿ ಸಂಚಾರ ವ್ಯವಸ್ಥೆಯ ಮೇಲೆ ನಿಗಾ ಇಟ್ಟು ಅಪಘಾತ ತಡೆಯಲು, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಕೂಡ ಅನುಕೂಲವಾಗುತ್ತದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Leave a Reply

error: Content is protected !!