ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮೇಲ್ವಿಚಾರಕರಿಂದ ಅಧಿಕಾರ ಹಸ್ತಾಂತರ

ಶೇರ್ ಮಾಡಿ

ಪುತ್ತೂರು: ಬಲ್ನಾಡು ವಲಯದಲ್ಲಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿ ಯೋಜನೆಯ ಆದೇಶದಂತೆ ಅರಿಯಡ್ಕ ವಲಯಕ್ಕೆ ವರ್ಗಾವಣೆ ಆದ ಮೇಲ್ವಿಚಾರಕ ಹರೀಶ್ ಕುಲಾಲ್ ಅವರು ಅರಸೀಕೆರೆ ತಾಲೂಕಿನಿಂದ ವರ್ಗಾವಣೆ ಆಗಿ ಪುತ್ತೂರಿನ ಬಲ್ನಾಡು ವಲಯಕ್ಕೆ ಆಗಮಿಸಿದ ಪ್ರಶಾಂತ್ ಕುಮಾರ್ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಹರೀಶ್ ಕುಲಾಲ್, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಮೇಲ್ವಿಚಾರಕ ಪ್ರಶಾಂತ್ ಕುಮಾರ್ ಅವರು ಎಲ್ಲರ ಸಹಕಾರ ಕೋರಿದರು.

ಬಲ್ನಾಡು ವಲಯದ ಅಧ್ಯಕ್ಷ ಸತೀಶ್ ಒಳಗುಡ್ಡೆ, ಮಾಜಿ ವಲಯಾಧ್ಯಕ್ಷ ಅಂಬ್ರೋಸ್ ಡಿ ಸೋಜ, ವಲಯದ ಒಕ್ಕೂಟ ಅಧ್ಯಕ್ಷರಾದ ಮಹಾಲಿಂಗ ನಾಯ್ಕ, ಸೌಮ್ಯ ವೀರಪ್ಪ ನಾಯ್ಕ, ಭಾಸ್ಕರ, ನಾಗೇಶ್ ನಾಯ್ಕ, ಪದಾಧಿಕಾರಿಗಳಾದ ಉಮಾವತಿ, ಜಗದೀಶ್ ಮತ್ತು ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಮಹಾಲಿಂಗ ನಾಯ್ಕ ಮತ್ತು ಪ್ರಮೀಳಾ ಅನಿಸಿಕೆ ವ್ಯಕ್ತಪಡಿಸಿದರು. ಪ್ರಮೀಳಾ ಸ್ವಾಗತಿಸಿ, ಚಿತ್ರ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!