ಉಪ್ಪಿನಂಗಡಿ: ಮೂರ್ತೇದಾರರ ಸೇವಾ ಸಹಕಾರಿ ಸಂಘ ನಿ. ಉಪ್ಪಿನಂಗಡಿ ಇದರ ಅಧ್ಯಕ್ಷ ಹುದ್ದೆಗಾಗಿ ಚುನಾವಣೆಯು ದಿನಾಂಕ ಮೇ.24ರಂದು ಸಂಘದ ಪ್ರಧಾನ ಕಛೇರಿ ಉಪ್ಪಿನಂಗಡಿಯಲ್ಲಿ ನಡೆಯಿತು.
ಸಂಘದ ಹಿಂದಿನ ಅಧ್ಯಕ್ಷರಾದ ಡಾ.ರಾಜರಾಮ್ ಕೆ.ಬಿ ಇವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಹುದ್ದೆಗೆ ನೂತನ ಅಧ್ಯಕ್ಷರಾಗಿ ಅಜೀತ್ ಕುಮಾರ್ ಪಾಲೇರಿ ಇವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಡಾ.ರಾಜಾರಾಮ್ ಕೆ.ಬಿ, ಮಾಧವ ಆರಿಜಾಲು, ಶೀನಪ್ಪ ಪೂಜಾರಿ, ಚೆನ್ನಪ್ಪ ಪೂಜಾರಿ, ಶಶಿಧರ್, ಚಂದ್ರಶೇಖರ ಬಾಣಜಾಲು, ಸುನೀತಾ ಹಾಗೂ ಚಂದ್ರಕಲಾ ಉಪಸ್ಥಿತರಿದ್ದರು.
ಚುಣಾವಣಾಧಿಕಾರಿಯಾಗಿ ಪುತ್ತೂರು ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಶೋಭಾ ಇವರು ಉಪಸ್ಥಿತರಿದ್ದು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ ಸಹಕರಿಸಿದರು.