ಶಿರಾಡಿ: ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿ ಟೆಂಪೋ ಟ್ರಾವೆಲ್ ನ ಚಾಲಕನ ಅಜಾಗರೂಕತೆಯಿಂದ ಲಾರಿಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಮೇ.23ರ ಮಧ್ಯರಾತ್ರಿ ಸಂಭವಿಸಿದೆ.
ಮಂಗಳೂರಿನಿಂದ ಪಾರ್ಸೆಲ್ ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಲಾರಿ ಶಿರಾಡಿ ಗ್ರಾಮದ ಬರ್ಚಿನಹಳ್ಳ ಎಂಬಲ್ಲಿಗೆ ತಲುಪುತಿದ್ದಂತೆ ಬೆಂಗಳೂರಿನ ಕಡೆಯಿಂದ ಬರುತ್ತಿದ್ದ ಟೆಂಪೋ ಟ್ರಾವೆಲ್ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿಕೊಂಡು ಬಂದು ಮಹಮ್ಮದ್ ಮನ್ಸೂರ್(41) ಮಡಂತ್ಯಾರ್ ಎಂಬವರು ಚಲಾಯಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಟ್ರಾವೆಲ್ ನಲ್ಲಿದ್ದ ಚಂದ್ರಕಲಾ, ಲಾರಿ ಚಾಲಕ ಮಹಮ್ಮದ್ ಮನ್ಸೂರು ಗಾಯಗೊಂಡಿದ್ದು, ಇವರನ್ನು ವಾಹನವೊಂದರಲ್ಲಿ ಚಿಕಿತ್ಸೆಗಾಗಿ ಹಾಸನಕ್ಕೆ ಕಳಿಸಿಕೊಡಲಾಗಿದೆ.
ಟೆಂಪೋ ಟ್ರಾವೆಲ್ ಚಾಲಕ ರಂಗಸ್ವಾಮಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.