ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಕೆಇಎ ವಿಶೇಷ ಸೂಚನೆ

ಶೇರ್ ಮಾಡಿ

ಬೆಂಗಳೂರು: ಕರ್ನಾಟಕ ಪಿಯು ಬೋರ್ಡ್ ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 2023ಕ್ಕಿಂತ ಮುಂಚೆ ಪಾಸಾಗಿರುವವರು ಮತ್ತು 12ನೇ ತರಗತಿಯನ್ನು ಸಿಬಿಎಸ್‌ಇ, ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ (ಜಮ್ಮು ಮತ್ತು ಕಾಶ್ಮೀರ ಸೇರಿದಂತೆ) ಮತ್ತಿತರ ಬೋರ್ಡ್ ಗಳ ಪರೀಕ್ಷೆಯನ್ನು 2023ರಲ್ಲಿ ಪೂರೈಸಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ 12ನೇ ತರಗತಿಯ ಅಂಕಗಳನ್ನು ಆನ್ ಲೈನ್ ಮೂಲಕ ಮೇ 31ರ ಒಳಗೆ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬುಧವಾರ ಸೂಚಿಸಿದೆ.

ಕೆಇಎ ವ್ಯವಸ್ಥಾಪಕ ನಿರ್ದೇಶಕಿ ಎಸ್. ರಮ್ಯಾ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಕೆಇಎ ಪೋರ್ಟಲ್ ನ ನಿಗದಿತ ಲಿಂಕ್‌ ಬಳಸಿಕೊಂಡು ಅಭ್ಯರ್ಥಿಗಳು ಅಂಕಗಳನ್ನು ಮೇ 31ರೊಳಗೆ ದಾಖಲಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯ ಪಠ್ಯಕ್ರಮದಲ್ಲಿ 2023ರಲ್ಲಿ ದ್ವಿತೀಯ ಪಿಯುಸಿ ಓದಿದವರ ಅಂಕಗಳನ್ನು ಪ್ರಾಧಿಕಾರವು ನೇರವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಡೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಪುನಃ ತೆಗೆದುಕೊಂಡಿರುವ ಅಭ್ಯರ್ಥಿಗಳು (ರಿಪೀಟರ್ಸ್) ಕೂಡ ಅಂಕಗಳನ್ನು ದಾಖಲಿಸಬೇಕು. ಅರ್ಹತಾ ಕಂಡಿಕೆ’ ‘Clause-Y’ ಅನ್ನು ಆಯ್ಕೆ ಮಾಡಿರುವ ಅಭ್ಯರ್ಥಿಗಳೂ ಅಂಕಗಳನ್ನು ಪೋರ್ಟಲ್‌ನಲ್ಲಿ ದಾಖಲಿಸಬೇಕು.
ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕಾಗಿ ಅಭ್ಯರ್ಥಿಗಳು 2023ರ ‘ನಾಟಾ’ (NATA-2023) ಪರೀಕ್ಷೆಯ ಅಂಕಗಳನ್ನು ಅರ್ಹತೆಗೆ ಅನುಗುಣವಾಗಿ ದಾಖಲಿಸಬಹುದು. ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಗೆ ಭೇಟಿ ನೀಡಬಹುದು.

Leave a Reply

error: Content is protected !!