ನೆಲ್ಯಾಡಿ: ರಾಜ್ಯಮಟ್ಟದ ಅಂತರ್ ಕಾಲೇಜ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ಅಭಿರಂಜನ್ ಗೌಡ ಹೊಸವಕ್ಲು

ಶೇರ್ ಮಾಡಿ

ನೆಲ್ಯಾಡಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ರಾಜ್ಯಮಟ್ಟದ ಅಂತರ್ ಕಾಲೇಜ್ ಕ್ರೀಡಾಕೂಟವನ್ನು ಆಯೋಜಿಸಿತ್ತು.

ಕ್ರೀಡಾಕೂಟದಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮೂರನೇ ವರ್ಷದ ಸಿವಿಲ್ ಇಂಜಿನಿಯರ್ ವ್ಯಾಸಂಗ ಮಾಡುತ್ತಿರುವ ಅಭಿರಂಜನ್ ಗೌಡ ಹೊಸವಕ್ಲು-ನೆಲ್ಯಾಡಿ ಇವರು 100 ಮೀಟರ್ ಹಾಗೂ 4*100 ಮೀಟರ್ ರಿಲೆಯಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ನೆಲ್ಯಾಡಿಯ ರವಿಚಂದ್ರ ಗೌಡ ಹೊಸವಕ್ಲು ಮತ್ತು ಶ್ರೀಮತಿ ಸುಪ್ರೀತ ರವಿಚಂದ್ರ ಇವರ ಪುತ್ರ.

Leave a Reply

error: Content is protected !!