ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಚತುಷ್ಪಥ ಕಾಮಗಾರಿ ಅಸಮರ್ಪಕ ನಿರ್ವಹಣೆ; ಪ್ರತಿಭಟನೆಯ ಎಚ್ಚರ

ಶೇರ್ ಮಾಡಿ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಮುಖ್ಯಪೇಟೆಯಲ್ಲಿ ಚತುಷ್ಪಥ ಕಾಮಗಾರಿ ಹಿನ್ನೆಲೆ ಚರಂಡಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ
ಚರಂಡಿ ಅಸಮರ್ಪಕ ನಿರ್ವಹಣೆ, ಕಳಪೆ ಕಾಮಗಾರಿ, ಚರಂಡಿಯ ಒಳಗಡೆ ಮಣ್ಣಿನ ರಾಶಿ, ಸಿಮೆಂಟ್ ನ ರಾಶಿ, ಕಸ ಕಡ್ಡಿಗಳನ್ನು ತೆಗೆಯದೆ ಚರಂಡಿಯನ್ನು ನಿರ್ಮಿಸಿರುವುದರಿಂದ ಮಳೆ ನೀರು ರಸ್ತೆಯಲ್ಲೇ ಬರುವ ಸಾಧ್ಯತೆ ಇದ್ದು, ಸಮರ್ಪಕವಾದ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ಕೆಎನ್ಆರ್ ಕಂಪನಿಯ ಇಂಜಿನಿಯರ್ ಮಹೇಂದ್ರ ಸಿಂಗ್ ಅವರನ್ನು ಅವ್ಯವಸ್ಥೆಯ ಸ್ಥಳಗಳಿಗೆ ಭೇಟಿ ನೀಡಿಸಿ ಕಳಪೆ ಕಾಮಗಾರಿಯನ್ನು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತೋರಿಸಿ ಮನವರಿಕೆ ಮಾಡಲಾಯಿತು.

ಜೂನ್ 03ರ ಒಳಗೆ ಸಮರ್ಪಕವಾಗಿ ಕೆಲಸವನ್ನು ನಿರ್ವಹಿಸಿ ಕೊಡಲಾಗುವುದೆಂದು ಕೆಎನ್ಆರ್ ಕಂಪನಿಯ ಇಂಜಿನಿಯರ್ ಮಹೇಂದ್ರ ಸಿಂಗ್ ಭರವಸೆಯನ್ನು ನೀಡಿ ಒಪ್ಪಿಕೊಂಡಿದ್ದಾರೆ.

ಅನೇಕ ಬಾರಿ ನೆಲ್ಯಾಡಿ ಪೇಟೆಯಲ್ಲಿನ ಚರಂಡಿಗಳು, ಮೋರಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗಾಗ ಗಮನಕ್ಕೆ ತಂದರು ಸರಿಪಡಿಸುವ ಕಾರ್ಯ ನಡೆದಿಲ್ಲ. ಹಾಗಾಗಿ ಇಂದು ಕಡೆಯ ಬಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಜೂನ್ 03ರ ಒಳಗೆ ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸಬೇಕು. ಒಂದು ವೇಳೆ ಸರಿಪಡಿಸಲಾಗದಿದ್ದಲ್ಲಿ ಜೂನ್ 03ರ ರಂದು ಕಟ್ಟಡ ಮಾಲಕರು, ವರ್ತಕರು ಹಾಗೂ ಸಾರ್ವಜನಿಕರು ಸೇರಿ ರಸ್ತೆ ಬಂದ್ ಮಾಡಿ ಪ್ರತಿಭಟಿಸುವುದಾಗಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷರಾದ ಎ.ಕೆ ವರ್ಗೀಸ್ ತಿಳಿಸಿದರು.

ಈ ಸಂದರ್ಭದಲ್ಲಿ ಕಟ್ಟಡ ಮಾಲಕರ ಸಂಘದ ಅಧ್ಯಕ್ಷರಾದ ಎ.ಕೆ ವರ್ಗೀಸ್, ವರ್ತಕರ ಸಂಘದ ಅಧ್ಯಕ್ಷರಾದ ರಫೀಕ್ ಸೀಗಲ್, ವರ್ತಕ ಸಂಘದ ಉಪಾಧ್ಯಕ್ಷರಾದ ಗಣೇಶ್ ರಶ್ಮಿ,, ಕಟ್ಟಡ ಮಾಲಕರ ಸಂಘದ ಕಾರ್ಯದರ್ಶಿ ರವಿಚಂದ್ರ ಹೊಸವಕ್ಲು, ನೆಲ್ಯಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಹಾಗೂ ಕಟ್ಟಡ ಮಾಲಕರು ಹಾಗೂ ವರ್ತಕರು ಉಪಸ್ಥಿತರಿದ್ದರು.

Leave a Reply

error: Content is protected !!