ಇಚಿಲಂಪಾಡಿ ಸಮೀಪದ ನಡುಮನೆ ಎಂಬಲ್ಲಿ ಆನೆ ಪ್ರತ್ಯಕ್ಷ : ವ್ಯಕ್ತಿಗೆ ಗಾಯ

ಶೇರ್ ಮಾಡಿ

ಕಡಬ ತಾಲೂಕಿನ ಇಚಿಲಂಪಾಡಿ ಸಮೀಪದ ನಡುಮನೆ ಎಂಬಲ್ಲಿ ಭಾನುವಾರ ಬೆಳಗ್ಗಿನಿಂದಲೇ ಆನೆ ಹಾಗೂ ಮರಿಯಾನೆ ಸಂಚರಿಸುತ್ತಿತ್ತು. ಇಂದು ಇಚಿಲಂಪಾಡಿಯ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ವಿಜು ಕುಮಾರ್ ಎಂಬುವರು ಕೆಲಸದ ನಿಮಿತ್ತ ನಡುಮನೆ ಮಾರ್ಗವಾಗಿ ತೆರಳಿದ ಸಂದರ್ಭ ಆನೆಯನ್ನು ಕಂಡು ಗಾಬರಿಗೊಂಡು ಓಡಿ ಬರುವಾಗ ಬಿದ್ದು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅವರನ್ನು ಕಡಬದ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲೆನ್ಸ್ ನ ಮೂಲಕ ಪುತ್ತೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಸ್ಥಳದಲ್ಲಿ ಅರಣ್ಯ ಇಲಾಖಾಧಿಕಾರಿಗಳು, ಪೋಲಿಸ್ ಇಲಾಖೆ, ಜನಪ್ರತಿನಿಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದು ಮುಂಜಾಗ್ರತೆ ಕ್ರಮವನ್ನು ವಹಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

Leave a Reply

error: Content is protected !!