ಜಿ.ಪಂ., ತಾ.ಪಂ. ಚುನಾವಣೆ: 4 ವಾರಗಳ ಕಾಲಾವಕಾಶ ಕೋರಿಕೆ

ಶೇರ್ ಮಾಡಿ

ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಕಾಲ ಸನ್ನಿಹಿತವಾಗಿದ್ದು, ನೂತನ ಸರಕಾರ ಚುನಾವಣೆ ನಡೆಸುವತ್ತ ಮುಂದಡಿ ಇಟ್ಟಂತೆ ಕಂಡುಬರುತ್ತಿದೆ. ಅದಕ್ಕೆ ಪೂರಕವೆಂಬಂತೆ ಮೀಸಲಾತಿ ನಿಗದಿಪಡಿಸುವ ನ್ಯಾಯಾ ಲಯದ ಆದೇಶ ಪಾಲಿಸುವ ದಿಸೆಯಲ್ಲಿ ಹೈಕೋರ್ಟ್‌ಗೆ ಸರಕಾರ 4 ವಾರಗಳ ಸಮಯ ಕೇಳಿದೆ.

ವಿಚಾರಣೆ ವೇಳೆ ಸರಕಾರದ ಪರ ಹಾಜರಾದ ನೂತನ ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಜಿ.ಪಂ.- ತಾ.ಪಂ. ಚುನಾವಣೆ, ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ನೀಡಿರುವ ಆದೇಶದಲ್ಲಿನ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ಪಾಲಿಸಲು ಸ್ವಲ್ಪ ಸಮಯ ಬೇಕು. 4 ವಾರ ಕಾಲಾವಕಾಶ ನೀಡಿ ಎಂದು ಕೋರಿದರು. ಇದಕ್ಕೆ ಒಪ್ಪಿದ ನ್ಯಾಯ ಪೀಠ, ವಿಚಾರಣೆಯನ್ನು ಜೂ.28ಕ್ಕೆ ಮುಂದೂಡಿತು.

Leave a Reply

error: Content is protected !!