ನೇವಿ ಅಗ್ನಿವೀರರ ನೇಮಕ: 10th ಅರ್ಹತೆ ವಿಭಾಗದಲ್ಲಿ ಹುದ್ದೆ., ಅರ್ಜಿಗೆ ಜೂ.15 ಕೊನೆ ದಿನ

ಶೇರ್ ಮಾಡಿ

ಭಾರತೀಯ ನೌಕಾಪಡೆಯು ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ, ಮೆಟ್ರಿಕ್ಯೂಲೇಷನ್‌ ಅರ್ಹತೆ ವಿಭಾಗದಲ್ಲಿ 100 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳ ಪೈಕಿ 20 ಹುದ್ದೆಗಳು ಮಹಿಳೆಯರಿಗೆ ಮೀಸಲಿವೆ. ಈ ಹುದ್ದೆಗಳಿಗೆ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಜೂನ್‌ 15 ರೊಳಗೆ ಅರ್ಜಿಸಲ್ಲಿಸಿ.

ಅಗ್ನಿವೀರರು ಎಸ್‌ಎಸ್‌ಆರ್ (10+2 ವಿದ್ಯಾರ್ಹತೆಯುಳ್ಳವರಿಗೆ) ನೇಮಕಾತಿಗೂ ಈಗಾಗಲೇ ಅರ್ಜಿ ಸ್ವೀಕಾರ ಆರಂಭವಾಗಿದ್ದು, ಈಗ ಅಗ್ನಿವೀರರು ಎಂಆರ್ (10ನೇ ತರಗತಿ ವಿದ್ಯಾರ್ಹತೆಯುಳ್ಳವರಿಗೆ) ಹುದ್ದೆಗಳಿಗೂ ಮಿಲಿಟರಿ ಉದ್ಯೋಗ ಆಸಕ್ತರು ಅರ್ಜಿ ಸಲ್ಲಿಸಬಹುದು.

ಅಗ್ನಿವೀರರು ಎಂಆರ್ ಹುದ್ದೆಗಳ ಸಂಖ್ಯೆ : 100
ಅಗ್ನಿವೀರರು ಎಂಆರ್ ಹುದ್ದೆಗಳಿಗೆ ವಿದ್ಯಾರ್ಹತೆ: 10ನೇ ತರಗತಿ / ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು.
ವಯೋಮಿತಿ ಅರ್ಹತೆ : 01 ನವೆಂಬರ್ 2002 – 30 ಏಪ್ರಿಲ್ 2006 ರ ನಡುವೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.

ಅಗ್ನಿವೀರರು ಎಂಆರ್ ಹುದ್ದೆಗಳಿಗೆ ದೈಹಿಕ ಅರ್ಹತೆಗಳು
ಪುರುಷ ಅಭ್ಯರ್ಥಿಗಳ ಎತ್ತರ ಕನಿಷ್ಠ 157 ಸೆಂ.ಮೀ ಇರಬೇಕು. ಮಹಿಳಾ ಅಭ್ಯರ್ಥಿಗಳ ಎತ್ತರ ಕನಿಷ್ಠ 152 ಸೆಂ.ಮೀ ಇರಬೇಕು.

ವಿಶೇಷ ದಿನಾಂಕಗಳು
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 29-05-2023
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 15-06-2023

ಅಗ್ನಿವೀರರು ಹುದ್ದೆ ಅವಧಿ, ಸೌಲಭ್ಯಗಳು, ವೇತನ ಮಾಹಿತಿ

  • ಅಗ್ನಿವೀರರು ಸೇವೆಯ ಅವಧಿ 4 ವರ್ಷ ಮಾತ್ರ.
  • ವಾರ್ಷಿಕ ರೂ.4.76 ಲಕ್ಷದಿಂದ ನಾಲ್ಕನೇ ವರ್ಷದಲ್ಲಿ ರೂ.6.72 ಲಕ್ಷದವರೆಗೆ ವೇತನ ಇರುತ್ತದೆ.
  • ಸೇವಾ ನಿಧಿ ಪ್ಯಾಕೇಜ್‌ ಅನ್ನು 4 ವರ್ಷದ ನಿವೃತ್ತಿ ನಂತರ ಟ್ಯಾಕ್ಸ್‌ ಫ್ರೀ ಆಗಿ ರೂ.11.71 ಲಕ್ಷ ನೀಡಲಾಗುತ್ತದೆ.
  • ರೂ.48 ಲಕ್ಷ ಇನ್ಸುರೆನ್ಸ್‌ ಪ್ಯಾಕೇಜ್‌ ಇರುತ್ತದೆ.
  • ಅಗ್ನಿವೀರ್ ಸ್ಕಿಲ್ ಸರ್ಟಿಫಿಕೇಟ್‌ ಅನ್ನು ನೀಡಲಾಗುತ್ತದೆ.
  • 1ನೇ ವರ್ಷದ ವೇತನ : ರೂ.30,000 .
  • 2ನೇ ವರ್ಷದ ವೇತನ : ರೂ.33,000
  • 3ನೇ ವರ್ಷದ ವೇತನ : ರೂ.36,500
  • 4ನೇ ವರ್ಷದ ವೇತನ : ರೂ.40,000
  • ಮಾಸಿಕ ವೇತನದ ಜತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ವಿದ್ಯಾರ್ಹತೆ SSLC / 10 ವಿದ್ಯಾರ್ಹತೆ
ವೆಬ್‌ಸೈಟ್‌ ವಿಳಾಸ https://www.joinindiannavy.gov.in/

Leave a Reply

error: Content is protected !!