ಗೌಡರ ಯಾನೆ ಒಕ್ಕಲಿಗರ ಸಂಘ ವಾರ್ಷಿಕ ಸಮಾವೇಶ ಹಾಗೂ ಸಾಮೂಹಿಕ ಸತ್ಯ ನಾರಾಯಣ ಪೂಜೆ

ಶೇರ್ ಮಾಡಿ

ಪದ್ಮುಂಜ: ಗೌಡರ ಯಾನೆ ಒಕ್ಕಲಿಗರ ಸಂಘ ಕಣಿಯೂರು ಗ್ರಾಮ ಪದ್ಮುಂಜ ವಲಯ ಹಾಗೂ ಯುವ ವೇದಿಕೆ ಇದರ ವಾರ್ಷಿಕ ಸಮಾವೇಶ ಹಾಗೂ ಸಾಮೂಹಿಕ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮವು ಮೇ 28ರಂದು ಪದ್ಮುಂಜ ಮೋಹನ ಗೌಡರ ಮನೆಯಲ್ಲಿ ನಡೆಯಿತು.

ಮುಂಡೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳು ಆನಂದ ಗೌಡ ಮುಂಡೂರು ಇವರ ವೈದಿಕ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ವಾರ್ಷಿಕ ಸಮಾವೇಶದ ಸಭಾ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ರವರು ಮಾತನಾಡಿ ದೇಶದ ಬೆನ್ನೆಲುಬಾಗಿರುವ ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದ ನಾವು ದೇಶಕ್ಕೆ ಆಧಾರವಾಗಿರುವ ಕೆಲಸದ ಜೊತೆಜೊತೆಗೆ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆಯಬೇಕು. ಇದಕ್ಕೆ ನಾವು ವಿದ್ಯಾವಂತರಾಗುವುದರ ಜೊತೆಗೆ ಬುದ್ಧಿವಂತರಾಗಬೇಕು. ಯುವ ಜನತೆ ಸಮಾಜದಲ್ಲಿ, ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಾಗ ಅನುಭವದ ಮೂಲಕ ಮಾತ್ರ ಇದನ್ನು ಪಡೆಯಲು ಸಾಧ್ಯ ಎಂದರು.

ಪೃಥ್ವೀಶ್ ಧರ್ಮಸ್ಥಳ ಮಾತನಾಡಿ ನಾವು ಒಕ್ಕಲಿಗ ಸಮುದಾಯದಲ್ಲಿ ಹುಟ್ಟಿದವರು ಎಂಬ ಹೆಮ್ಮೆಯ ಜೊತೆಗೆ ಜಾತ್ಯಾಭಿಮಾನ ನಮ್ಮಲ್ಲಿ ಇರಬೇಕು. ಆಗ ಮಾತ್ರ ಎಲ್ಲಾ ಯುವಜನತೆ ಒಗ್ಗಟ್ಟಾಗಿ ಜಾತಿ ಸಂಘಟನೆಯನ್ನು ಬಲಪಡಿಸಲು ಸಾಧ್ಯ. ಹಾಗಾಗಿ ಈ ಕಾರ್ಯಕ್ಕೆ ಯುವ ಜನತೆ ಮುನ್ನಡೆಯಬೇಕು ಎಂದು ಕರೆನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮುಂಜ ವಲಯದ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಮಾಧವ ಗೌಡ ಉರುಂಬುತ್ತಿಮಾರ್ ವಹಿಸಿದ್ದರು. ವೇದಿಕೆಯಲ್ಲಿ ಮೋಹನ ಗೌಡ ಉಪನ್ಯಾಸಕರು ಸ.ಪ ಪೂ. ಕಾಲೇಜ್ ನಡ, ಪದ್ಮನಾಭ ಗೌಡ ನಿರ್ದೇಶಕರು ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಒಕ್ಕೂಟ ಮಂಗಳೂರು, ಯಶವಂತ ಗೌಡ ಬೆಳಾಲು ಅಧ್ಯಕ್ಷರು ತಾಲೂಕು ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸಂಘ ಬೆಳ್ತಂಗಡಿ, ಪ್ರಮೋದ್ ಗೌಡ ದಿಡುಪೆ ಉಪಾಧ್ಯಕ್ಷರು ತಾಲೂಕು ಯುವ ವೇದಿಕೆ ಗೌಡರ ಯಾನೆ ಒಕ್ಕಲಿಗರ ಸಂಘ ಬೆಳ್ತಂಗಡಿ, ಆನಂದ ಗೌಡ ಧರ್ಮದರ್ಶಿಗಳು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಮುಂಡೂರು, ಗಾಯತ್ರಿ ಗೋಪಾಲ ಗೌಡ ಅಧ್ಯಕ್ಷರು ಗ್ರಾಮ ಪಂಚಾಯತ್ ಕಣಿಯೂರು ಉಪಸ್ಥಿತರಿದ್ದರು

ಪ್ರತಿಭಾ ಪುರಸ್ಕಾರ
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಅನನ್ಯ ಪಿ.ಆರ್ D/o ರಾಮಚಂದ್ರ ಗೌಡ ಪೊಯ್ಯ, ವೀಕ್ಷಾ.ಕೆ D/o ಶೋಭಾ ಕೊಲ್ಲಾಜೆ, ಯಕ್ಷಿತಾ.ಕೆ D/o ಬಾಲಣ್ಣ ಕೆದಿಲ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಯಶ್ವಿತ್ ಕೆ S/o ಮೋಹನ್ ಗೌಡ ಪದ್ಮುಂಜ, ಅಶ್ವಿನಿ D/o ಆನಂದ ಗೌಡ ಕಾಯರಕಂಡ ಇವರನ್ನು ಸನ್ಮಾನಿಸಲಾಯಿತು.

ನೂತನ ಪದಾಧಿಕಾರಿಗಳ ಆಯ್ಕೆ
ಅಧ್ಯಕ್ಷರಾಗಿ ನಾರಾಯಣ ಗೌಡ ಮುಚ್ಚೂರು, ಉಪಾಧ್ಯಕ್ಷರಾಗಿ ಮೋಹನ ಗೌಡ ಪದ್ಮುಂಜ,ಕಾರ್ಯದರ್ಶಿಯಾಗಿ ಕರುಣಾಕರ ಉರುಂಬುತ್ತಿಮಾರ್, ಜೊತೆ ಕಾರ್ಯದರ್ಶಿಯಾಗಿ ಧನ್ಯ ಕುಮಾರ್ ಪದ್ಮುಂಜ, ಕೋಶಾಧಿಕಾರಿಯಾಗಿ ಕುಶಾಲಪ್ಪ ಗೌಡ ಕೆದಿಲ ಹಾಗೂ ಯುವ ವೇದಿಕೆಗೆ ಅಧ್ಯಕ್ಷರಾಗಿ ಶರತ್ ಮೂರ್ಜಾಲ್, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಮುಂಡ್ರೊಟ್ಟು, ಕಾರ್ಯದರ್ಶಿಯಾಗಿ ವಿಜಯ ಗೌಡ ಅಲೆಕ್ಕಿ, ಜೊತೆ ಕಾರ್ಯದರ್ಶಿಯಾಗಿ ಪುರಂದರ ಗೌಡ ಹೊಸಬೆಟ್ಟು, ಕೋಶಾಧಿಕಾರಿಯಾಗಿ ಬಾಲಕೃಷ್ಣ ಬೊಳ್ಳರಮಜಲು ಮತ್ತು ಮಹಿಳಾ ವೇದಿಕೆಗೆ ಅಧ್ಯಕ್ಷರಾಗಿ ಶ್ರೀಮತಿ ಗಾಯತ್ರಿ ಗೋಪಾಲ ಗೌಡ ಬೊಳ್ಳರಮಜಲು, ಉಪಾಧ್ಯಕ್ಷರಾಗಿ ಶ್ರೀಮತಿ ಚಿನ್ನಮ್ಮ ಸಂಜೀವ ಗೌಡ ಪುದ್ದೊಟ್ಟು, ಕಾರ್ಯದರ್ಶಿಯಾಗಿ ಪ್ರಮೀಳಾ ಚೆನ್ನಪ್ಪ ಗೌಡ ಬೆರ್ಕೆ, ಜೊತೆ ಕಾರ್ಯದರ್ಶಿಯಾಗಿ ಜಯಶ್ರೀ ಕರುಣಾಕರ ಗೌಡ ಗಾಡಕೋಡಿ, ಕೋಶಾಧಿಕಾರಿಯಾಗಿ ಶಾರದ ರಾಮಣ್ಣ ಗೌಡ ಮುಚ್ಚೂರು ಇವರನ್ನು ಆಯ್ಕೆ ಮಾಡಲಾಯಿತು.
ಪೃಥ್ವಿ ಮತ್ತು ಬಳಗದವರ ಪ್ರಾರ್ಥೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ತಿಮ್ಮಯ್ಯ ಗೌಡ ಪದ್ಮುಂಜ ಸ್ವಾಗತಿಸಿದರು. ನಾರಾಯಣ ಗೌಡ ಮುಚ್ಚೂರು ಹಾಗೂ ಕರುಣಾಕರ ಉರುಂಬುತ್ತಿಮಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!