ಅಂಗಡಿಯಿಂದ 15 ಲಕ್ಷ ರೂ. ನಗದು ಎಗರಿಸಿದ್ದ ಆರೋಪಿಗಳ ಸೆರೆ

ಶೇರ್ ಮಾಡಿ

ಪುತ್ತೂರು: ಅಂಗಡಿಯೊಂದರಿಂದ ಎಂಟು ತಿಂಗಳ ಹಿಂದೆ 15 ಲಕ್ಷ ರೂ. ನಗದು ಕಳವುಗೈದಿದ್ದ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ ದೇವರಾಜ ಅರಸ್‌ ಬಡವಾಣೆಯ ಸಮೀರ್‌ (ಕಪ್ಪ), ಹಾಸನ ಶಂಕರಿಪುರಂನ ಚಂದ್ರಶೇಖರ್‌ (ಚಂದು) ಬಂಧಿತರು. ಆರೋಪಿಗಳು 2022 ಸೆ. 16ರಂದು ಪುತ್ತೂರು ನಗರದ ಮುಖ್ಯ ರಸ್ತೆಯ ಮಾಯಿದೆ ದೇವುಸ್‌ ಚರ್ಚ್‌ ಸಮೀಪದ ಪ್ರಕಾಶ್‌ ಫೂಟ್ ವೇರ್‌ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 15 ಲಕ್ಷ ರೂ. ಅನ್ನು ಕಳ್ಳತನ ಎಸಗಿದ್ದರು.

ಈ ಬಗ್ಗೆ ಪ್ರಕಾಶ್‌ ಫೂಟ್ ವೇರ್‌ ಮಳಿಗೆಯ ಮಾಲಕ ಸಮೀರ್‌ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

error: Content is protected !!